More

    ಲೈಂಗಿಕ ದೌರ್ಜನ್ಯಕ್ಕೆ ಜೀವಾವಧಿ ಶಿಕ್ಷೆ: ನ್ಯಾಯಾಧೀಶ. ಕೆ. ಗುರುಪ್ರಸಾದ

    ವಿಜಯವಾಣಿ ಸುದ್ದಿಜಾಲ ಗದಗ
    ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಠ 20 ವರ್ಷಗಳವರೆಗೆ ಶಿಕ್ಷೆ ಹಾಗೂ ಗರಿಷ್ಠ ಆಜೀವಪರ್ಯಂತ ಸೆರೆವಾಸ ಶಿೆಯನ್ನು ವಿಧಿಸುವಷ್ಟು ಪೋಕ್ಸೊ ಕಾಯ್ದೆ ಗಂಭೀರವಾಗಿದೆ ಎಂದು ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಕೆ. ಗುರುಪ್ರಸಾದ ಹೇಳಿದರು.
    ಗದಗ ತಾಲೂಕಿನ ನಾಗಾವಿ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ಕಾನೂನುಗಳ ಕುರಿತು ಕಾನೂನು ಸಾರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಲೈಂಗಿಕ ಉದ್ದೇಶದಿಂದ ಮಗುವಿನ ಖಾಸಗಿ ಅಂಗಾಂಗ ಮುಟ್ಟುವುದು ಲೈಂಗಿಕ ದೌರ್ಜನ್ಯವಾಗಿದೆ. ಚುಡಾಯಿಸುವುದು, ಮೊಬೈಲ್​ನಲ್ಲಿ ಕೆಟ್ಟದಾದ ಸಂದೇಶ ಕಳಿಸುವುದು, ಅಶ್ಲಿಲ ಚಿತ್ರ ಚಿತ್ರಿಸುವುದು, ಅಶ್ಲೀಲ ವಿಡಿಯೋಗಳನ್ನು ಕಳಿಸುವುದು, ವರ್ಗಾಯಿಸುವುದು ಶಿಕ್ಷೆಗೆ ಅರ್ಹವಾಗಿದೆ ಎಂದರು.
    ಬಾಲ್ಯ ವಿವಾಹವೂ ಸಹ ಶಿಕ್ಷರ್ಹ ಅಪರಾಧವಾಗಿದೆ. ಪ್ರೌಢ ಶಾಲೆ ಹಾಗೂ ಕಾಲೇಜಿನ ಹುಡುಗ&ಹುಡುಗಿಯರು ಪೋಕ್ಸೊ ಕಾಯ್ದೆಯ ಗಾಂಭೀರ್ಯವನ್ನು ಅರಿಯದೇ ಸಮಸ್ಯೇಗಿಡಾಗುವುದು ಕಂಡು ಬರುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆಯ ಕುರಿತು ಹಾಗೂ ಮಕ್ಕಳ ಕಾನೂನುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
    ಮಕ್ಕಳ ಕಲ್ಯಾಣ ಸಮಿತಿ ಅಧ್ಯೆ ಅನ್ನಪೂರ್ಣ ಗಾಣಿಗೇರ ಮಾತನಾಡಿ, ಮಕ್ಕಳ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಪೋಕ್ಸೊ ಕಾಯ್ದೆಯ ಪ್ರಕಾರ ಅಪರಾಧವಾಗುತ್ತದೆ. ಆಸೆ ಆಮಿಷಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ. ಇಂತಹ ಟನೆಗಳು ಕಂಡು ಬಂದರೆ ಕೂಡಲೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಅಥವಾ 112 ಗೆ ಕರೆ ಮಾಡಿ ವಿಷಯ ತಿಳಿಸಬೇಕು ಎಂದರು.
    ಜಿಲ್ಲಾ ಮಕ್ಕಳ ರಣಾಧಿಕಾರಿ ರಾಧಾ ಮಣ್ಣೂರ ಮಾತನಾಡಿ, ಅನಾಥ, ಓರ್ವ ಮಾತ್ರ ಪಾಲಕರು ಇರುವವರು, ಆಥಿರ್ಕವಾಗಿ ಹಿಂದುಳಿದ 8, 9, 10 ನೇ ತರಗತಿ ಮಕ್ಕಳ ಶಿಣಕ್ಕಾಗಿ 3 ವರ್ಷಗಳ ಕಾಲ ಪ್ರತಿ ತಿಂಗಳು 4 ಸಾವಿರ ಸಹಾಯಧನ ನೀಡಲಾಗುತ್ತದೆ. ಅರ್ಹ ವಿದ್ಯಾಥಿರ್ಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
    ಸಾರ್ವಜನಿಕ ಶಿಣ ಇಲಾಖೆ ಉಪ ನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದು ಕರೆ ನೀಡಿದರು.
    ವಿ.ವಿ. ನಡುವಿನಮನಿ, ಕುಬೇರಪ್ಪ ರಾಠೋಡ, ಬಸವಣ್ಣೆಪ್ಪ ಚಿಂಚಲಿ, ಮೈಲಾರಪ್ಪ ತಾಮ್ರಗುಂಡಿ, ಅಲ್ಲಾಸಾಬ ಪೀರಖಾನವರ, ಗವಿಯಪ್ಪ ಪೂಜಾರ, ಜೆ.ಎಂ. ಮುತ್ತಿನಪೆಂಡಿಮಠ, ಸಿ.ಬಿ. ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts