More

    ‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

    ಬೆಂಗಳೂರು: ಕಾಳ್ಗಿಚ್ಚಿನಂತೆ ಜಗತ್ತಿನಾದ್ಯಂತ ಆವರಿಸಿಕೊಳ್ಳುತ್ತಿರುವ ‘ಕಾಂತಾರ’ದ ಕ್ರೇಜ್ ಇದೀಗ ಮತ್ತೊಂದು ದಾಖಲೆಯನ್ನೂ ಮಾಡಿದೆ. ದಿನೇದಿನೆ ಹೊಸದೊಂದು ಪ್ರಥಮಕ್ಕೆ ನಾಂದಿ ಹಾಡುವ ಮೂಲಕ ದಾಖಲೆಗಳನ್ನು ಮಾಡುತ್ತಿರುವ ‘ಕಾಂತಾರ’ ಇದೀಗ ಇನ್ನೊಂದು ಪ್ರಥಮಕ್ಕೂ ಪಾತ್ರವಾಗಿದೆ.

    ಈಗಾಗಲೇ ಐಎಂಡಿಬಿ ರೇಟಿಂಗ್​ನಲ್ಲಿ ಅತ್ಯಧಿಕ ಪಾಯಿಂಟ್ (9.6) ಪಡೆದಿರುವ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಾಂತಾರ, ಮುಂಬೈನಲ್ಲಿ ಈಗಾಗಲೇ ಎರಡು ಪ್ರಥಮಗಳಿಗೆ ಸಾಕ್ಷಿಯಾಗಿದೆ.

    ಮುಂಬೈನ ಮರಾಠ ಮಂದಿರದಲ್ಲಿ ಡಬ್ಬಿಂಗ್ ಇಲ್ಲದೆ ಕನ್ನಡದಲ್ಲೇ ಬಿಡುಗಡೆಯಾದ ಪ್ರಪ್ರಥಮ ದಕ್ಷಿಣಭಾರತೀಯ ಸಿನಿಮಾ ಎಂಬ ಖ್ಯಾತಿಗೂ ‘ಕಾಂತಾರ’ ಪಾತ್ರವಾಗಿದೆ. ಮುಂಬೈನಲ್ಲಿ ಅತ್ಯಧಿಕ ಶೋಗಳನ್ನು ಪಡೆದ ಪ್ರಪ್ರಥಮ ಕನ್ನಡ ಸಿನಿಮಾ ಎಂಬ ಪ್ರಸಿದ್ಧಿಗೂ ‘ಕಾಂತಾರ’ ಭಾಜನವಾಗಿದೆ.

    ಇದೆಲ್ಲದರ ಮಧ್ಯೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ನಿನ್ನೆಯಷ್ಟೇ ‘ವರಾಹರೂಪಂ’ ಗೀತೆ ಬಿಡುಗಡೆ ಮಾಡಿದ್ದು, ಒಂದೇ ದಿನದಲ್ಲಿ ಅದು 39 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಮಾತ್ರವಲ್ಲ, ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂ. 1 ಸ್ಥಾನದಲ್ಲಿದೆ.

    ಇದರ ಜತೆಗೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಂತೋಷದ ಸಂಗತಿಯನ್ನೂ ಹಂಚಿಕೊಂಡಿದೆ. ಕಾಂತಾರ ಸಿನಿಮಾ ವಿಯೆಟ್ನಾಮ್​ನ ಹೊ ಚಿ ಮಿನ್​ ಸಿಟಿಯಲ್ಲಿ ಪ್ರದರ್ಶನ ಕಾಣಲಿದ್ದು, ಇಲ್ಲಿ ಬಿಡುಗಡೆ ಕಾಣುತ್ತಿರುವ ಪ್ರಪ್ರಥಮ ಕನ್ನಡ ಸಿನಿಮಾ ಇದಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್​ ಹೇಳಿಕೊಂಡಿದೆ.

    ‘ಕಾಂತಾರ’ಕ್ಕೆ ಮತ್ತೊಂದು ಸಂಭ್ರಮ: ವಿವಾದದ ನಡುವೆಯೂ ನಂ.1 ಸ್ಥಾನ; ಏನದು?

    ಚೇತನ್​ಗೆ ಯಾಕೆ ಉರಿ? ಎಂದು ಕಿಡಿಕಾರಿದ ಮುತಾಲಿಕ್​; ಹೇಳಿಕೆ ವಾಪಸ್ ಪಡೆಯಲು ಆಗ್ರಹ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts