More

    ಮೂವರು ಸಾಧಕರಿಗೆ ಕನ್ನಡ ವಿವಿ ನಾಡೋಜ

    ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 32ನೇ ನುಡಿಹಬ್ಬದಲ್ಲಿ ಸಮಾಜದಲ್ಲಿ ಅಪಾರ ಕೊಡುಗೆ ನೀಡಿರುವ ಬಾಲ್ಕಿ ಹಿರೆಮಠದ ಡಾ.ಬಸವಲಿಂಗ ಪಟ್ಟದೇವರು, ಆಂದ್ರ ಪ್ರದೇಶದ ಬುಡಕಟ್ಟು ವಿವಿಯ ಕುಲಪತಿ ಡಾ.ತೇಜಸ್ವಿ ವಿ.ಕಟ್ಟೀಮನಿ, ಬೆಂಗಳೂರಿನ ನ್ಯಾನೋ ಟೆಕ್ನಾಲಜಿ ವಿದ್ವಾಂಸ, ನ್ಯಾಕ್ ನಿವೃತ್ತ ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಅವರಿಗೆ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನಾಡೋಜ ಪದವಿ‌ ಪ್ರದಾನ ಮಾಡಿದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ಪದವಿ ಪ್ರದಾನ ಮಾಡಿ ಗೌರವಿಸಿದರು.

    ಇದನ್ನೂ ಓದಿ: ಹಂಪಿ ಉತ್ಸವ ಯಶಸ್ಸಿಗೆ ಶ್ರಮಿಸಿ

    ಲಲಿತಕಲೆಗಳ ನಿಕಾಯದ ವಿ.ಶ್ರೀನಿವಾಸಮೂರ್ತಿ ಅವರಿಗೆ ಜಾನಪದ ಮತ್ತು ಬುಡಕಟ್ಟು ಜೀವನ ವಿಧಾನಗಳ ದಾಖಲೀಕರಣ: ಸವಾಲು ಮತ್ತು ಸಾಧ್ಯತೆಗಳು ಶೀರ್ಷಿಕೆಯಡಿ ಡಿ.ಲಿಟ್. ಪದವಿ ಪ್ರದಾನ ಮಾಡಲಾಯಿತು. ನುಡಿಹಬ್ಬದಲ್ಲಿ ಕೇರಳ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಮೈಸೂರು ಹೆಗ್ಗಡದೇವನಕೋಟೆ ಅಂತರಸಂತೆ ಹೋಬಲಿಯ ಡಿಬಿ ಕುಪ್ಪೆ ಗ್ರಾ.ಪಂ.ಯ ಸೇಬಿನಕೊಲ್ಲೆಹಾಳು ಹಾಡಿಯ ಅತಿ ಕಡಿಮೆ ಜನಸಂಖ್ಯೆ ಇರುವ ಪಣಿಯನ್ ಬುಡಕಟ್ಟು ಸಮುದಾಯದ ದಿವ್ಯ ಎಸ್.ಆರ್. ಸೇರಿದಂತೆ ಒಟ್ಟು 275 ಪಿಎಚ್ ಡಿ ಪದವಿ ಪ್ರದಾನವಾಯಿತು.

    ಭಾಷಾ ನಿಕಾಯದ 104, ಸಮಾಜವಿಜ್ಞಾನಗಳ ನಿಕಾಯದಲ್ಲಿ 167, ಲಲಿತಕಲೆಗಳ ನಿಕಾಯದ 4 ಸೇರಿ ಒಟ್ಟು 275 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

    ಆಂದ್ರ ಪ್ರದೇಶದ ಅನಂತಪುರ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎ.ಕೋರಿ, ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಅದ್ಯಯನಾಂಗ ನಿರ್ದೇಶಕ ಪಿ.ಮಹದೇವಯ್ಯ ಇತರರಿದ್ದರು.

    ಡಾ.ಬಸವಲಿಂಗ ಪಟ್ಟದೇವರು, ಡಾ.ತೇಜಸ್ವಿ ವಿ.ಕಟ್ಟೀಮನಿ, ಡಾ.ಎಸ್.ಸಿ.ಶರ್ಮಾ ಅವರಿಗೆ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನಾಡೋಜ ಪದವಿ‌ ಪ್ರದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts