More

    ಚೆನ್ನೈನಲ್ಲಿ ಕನ್ನಡ ಕಲರವ: ಹೊರನಾಡ ಕನ್ನಡ ಸಂಘಟನೆಗಳಿಗೆ ಹೆಚ್ಚಿನ ಅನುದಾನ ಅಗತ್ಯ- ಎಂ.ಡಿ. ಲಕ್ಷ್ಮೀನಾರಾಯಣ

    ಚೆನ್ನೈ: ತಮಿಳುನಾಡು ರಾಜಧಾನಿಯಲ್ಲಿ ಶನಿವಾರ ಕನ್ನಡ ಕಲರವ. ಸ್ಥಳೀಯ ಕನ್ನಡ ಬಳಗ ನೇತೃತ್ವದಲ್ಲಿ ಹಲವು ಕನ್ನಡ ಸಂಘಟನೆಗಳ ಆಶ್ರಯದಲ್ಲಿ‌ ಕರ್ನಾಟಕ ರಾಜ್ಯೋತ್ಸವವು ಸಡಗರ ಮತ್ತು ಸಂಭ್ರಮದಿಂದ ನಡೆಯಿತು.

    ಇದನ್ನೂ ಓದಿ: ವಿಭಿನ್ನವಾಗಿ ಅಭಿಮಾನ ತೋರ್ಪಡಿಸಿದ ಜೂ. ಎನ್​ಟಿಆರ್​ ಅಭಿಮಾನಿ; ವ್ಯಾಪಕ ಮೆಚ್ಚುಗೆ
    ನೂರಾರು ಕನ್ನಡಿಗರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಮಾಜಿ‌ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಹೊರನಾಡ ಕನ್ನಡ ಸಂಘಟನೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ‌ ಕನ್ನಡ ಚಟುವಟಿಕೆಗಳಿಗೆ ಶಕ್ತಿ ತುಂಬಬೇಕಿದೆ ಎಂದರು.

    ಹೊರನಾಡಿನ ಕನ್ನಡ ಸಂಘಟನೆಗಳಲ್ಲೇ ಅತ್ಯಂತ ಚಟುವಟಿಕೆಗಳಲ್ಲಿರುವುದು ಚೆನ್ನೈನ ಕನ್ನಡ ಬಳಗದ ಹೆಗ್ಗಳಿಕೆಯಾಗಿದೆ. ಕರ್ನಾಟಕ ಹಾಗೂ ಹೊರನಾಡಿನ ಸಂಘಟನೆಗಳು ಇವರ ಕರುನಾಡಿನ ಪ್ರೇಮ, ಭಾಷಾ ಬದ್ಧತೆ ಹಾಗೂ ಸಂಘಟನಾ ಕಲೆಯನ್ನು ಅನುಸರಿಸಬೇಕು. ಈ ಮಾತನ್ನ ನಾನು ಎಲ್ಲ ಕಡೆಗಳಲ್ಲೂ ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದರು.

    ಕನ್ನಡದ ಪ್ರೇಮ ಕೇವಲ ನವೆಂಬರ್ ಮಾಸಕ್ಕೆ ಮಾತ್ರ ಸೀಮಿತವಾಗದೆ ಪ್ರತಿ ದಿನದ ಉತ್ಸವವಾಗಬೇಕು ಎಂದರು.
    ಕಾರ್ಯಕ್ರಮದಲ್ಲಿ ಚೆನ್ನೈನ ಪ್ರಿಂಟಿಂಗ್ ಉದ್ಯಮಿ, ಹಲವಾರು ಕನ್ನಡ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಸ್.ರಾಮಚಂದ್ರ ಭಟ್ ಅವರಿಗೆ ಚೆನ್ನೈ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ತಮಿಳುನಾಡಿನ ಹಲವು ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಸಾಧನೆ ಮಾಡಿದ ಮಹನೀಯರಿಗೆ ಚೆನ್ನೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಉದ್ಯಮಿ ಪ್ರವೀಣ್ ಶೆಟ್ಟಿ, ಸಾಹಿತ್ಯ ಕ್ಷೇತ್ರದ ಶಾಂತಿ‌‌ ಕೆ. ಅಪ್ಪಣ್ಣ, ಸಮಾಜ ಸೇವೆಗೆ ಜೀವನ್ ದಾಸ್ ರೈ, ಆರೋಗ್ಯ ಕ್ಷೇತ್ರದಲ್ಲಿ‌ ಮಂಜುನಾಥ್ ಮಂಡಿಕಲ್, ಕಲಾ‌‌ ಕ್ಷೇತ್ರದಲ್ಲಿ ಅಪೇಕ್ಷಾ ಭಟ್, ಯುವಪ್ರತಿಭೆಗಳಾದ ಸುಶ್ರಿತ್ ವಿನಾಯಕ್ (ಶಿಕ್ಷಣ), ಅಪರ್ಣಾ ಎನ್. ಶರ್ಮಾ (ಕ್ರೀಡೆ) ಸ್ಮೃತಿ ಸುಧಾಕರ್ (ಕಲೆ) ಇವರನ್ನ ಅಭಿನಂದಿಸಲಾಯಿತು.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ‌ ಬಳಗದ ಸದಸ್ಯೆ‌, ಖ್ಯಾತ ನೃತ್ಯ ಕಲಾವಿದೆ ಮುಂಬೈನ ವಿನಯಾ ಅನಂತಕೃಷ್ಣ‌ರಿಂದ ನೃತ್ಯ ಪ್ರದರ್ಶನ ನಡೆಯಿತು.
    ಮೈಸೂರಿನ ನಟನ ತಂಡದಿಂದ ಕಣಿವೆಯ ಹಾಡು ನಾಟಕ‌ ಪ್ರದರ್ಶಿಸಲಾಯಿತು. ಕಲಾವಿದರಾದ ದಿಶಾ ರಮೇಶ್ ಮತ್ತು ಮೇಘಾಸಮೀರ ಅವರ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

    ಚೆನ್ನೈ, ತಮಿಳುನಾಡು ಹಾಗೂ ಕರ್ನಾಟಕದ ಇತರ ಭಾಗಗಳಿಂದ ಆಗಮಿಸಿದ ಒಂದು ಸಾವಿರಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಗದ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಂಡು‌ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದರು.

    ಬಳಗದ ಅಧ್ಯಕ್ಷ ಸತೀಶ್ ಗುಡೇರ ಸ್ವಾಗತಿಸಿ, ಕಾರ್ಯದರ್ಶಿ‌ ಮನೋಜ್ ಇನಾಂದಾರ್ ವಂದಿಸಿದರು. ಸುಧಾ ಪ್ರಸಾದ್, ಸುಲೋಚನಾ ಮೂರ್ತಿ ನಿರೂಪಿಸಿದರು.

    ಬಸ್​ ನಿಲ್ಲಿಸಿ ನಡುರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಲು ಹೋದ ನಟಿ, ಬಿಜೆಪಿ ನಾಯಕಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts