More

    ಖ್ಯಾತ ಕವಿ, ಭಾಷಾ ವಿಜ್ಞಾನಿ ಕೆ.ವಿ ತಿರುಮಲೇಶ್ ವಿಧಿವಶ

    ಹೈದರಾಬಾದ್: ಕೆ.ವಿ.ತಿರುಮಲೇಶ್, ಕನ್ನಡ ಭಾಷೆಯ ಬಹುಮುಖ ಕವಿ, ಭಾಷಾ ವಿಜ್ಞಾನಿ, ವಿದ್ವಾಂಸರು, ವಿಮರ್ಶಕರಾಗಿ ಪ್ರಸಿದ್ಧಿರಾಗಿದ್ದ ಇವರು ವಿಧಿವಶರಾಗಿದ್ದಾರೆ. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದ ಅವರು ಇದೀಗ ತಮ್ಮ ಬಾಳ ಪಯಣವನ್ನು ಕೊನೆಗೊಳಿಸಿದ್ದಾರೆ.

    ಇವರು 10ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬರೆದಿದ್ದು, 4 ಕಥಾ ಸಂಕಲನಗಳು, 3 ಕಾದಂಬರಿಗಳು, 5 ವಿಮರ್ಶಾ ಕೃತಿಗಳಿಗೆ ಲೇಖಕರಾಗಿದ್ದರು. ಇವರು 2 ನಾಟಕಗಳನ್ನೂ ಬರೆದಿದ್ದು, 5 ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

    ನಾಯಕ ಮತ್ತು ಇತರರು, ಜಾಗುವ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ ಕಥಾಸಂಕಲನಗಳು. ಆರೋಪ, ಅನೇಕ, ತರಂಗಾಂತರ ಕಾದಂಬರಿಗಳು. ವ್ಯಕ್ತಿ ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ, ಅಸ್ತಿತ್ವವಾದ, ವಿಮರ್ಶಾ ಬರಹಗಳು. ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ರಚನೆ ಮಾಡಿರುವ ತಿರುಮಲೇಶ್ ಅವರು ಎಜ್ರಾ ಪೌಂಡ್, ಚೀನಿ ಕವಿತೆಗಳನ್ನು ಅನುವಾದಿಸಿದ್ದಾರೆ. ತಿರುಮಲೇಶ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ.

    ಕೆವಿ ತಿರುಮಲೇಶ್ ಅವರು ಆರು ಕಥಾ ಸಂಕಲನಗಳು, ನಾಲ್ಕು ಕಿರು ಕಾದಂಬರಿಗಳು, ಎರಡು ನಾಟಕಗಳು, ಭಾವಗೀತೆ ಹಾಗೂ ಮಕ್ಕಳ ಕವಿತೆಗಳ ತಲಾ ಒಂದು ಸಂಕಲನಗಳು ಪ್ರಕಟವಾಗಿವೆ.

    ಕಥೆಗಾರನಾಗಿ ತಮ್ಮ ವೈನೋದಿತ ಶೈಲಿಯಲ್ಲಿ ಗಂಭೀರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಸ್ಯೆಗಳ ಸಂಕೀರ್ಣತೆಯನ್ನು ಅನಾವರಣಗೊಳಿಸುವ ಪರಿ ವಿಶಿಷ್ಟವಾಗಿವೆ.

    ವಿಶ್ವದ ಅಗ್ರಮಾನ್ಯ ಚಿಂತನೆ, ಜ್ಞಾನ, ಅನುಭವ, ದರ್ಶನಗಳನ್ನು ನಮ್ಮ ಕನ್ನಡ ಭಾಷೆಯೂ ತನ್ನದಾಗಿಸಿಕೊಳ್ಳಬೇಕು ಎಂಬ ಧೋರಣೆಯಿಂದ ತಿರುಮಲೇಶ ಅವರು ವಿವಿಧ ದೇಶ ಭಾಷೆಗಳ ಎಂಟು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts