More

    ಡಿಎನ್​ಎ ಇದು ಗುರುತಿನ ಕಣ; ಬಿಡುಗಡೆಗೆ ತಯಾರಿ, ಪ್ರಚಾರ ಶುರು..

    ಬೆಂಗಳೂರು: ಪ್ರಕಾಶ್ ರಾಜ್ ಮೇಹು ನಿರ್ದೇಶನದ ‘ಡಿಎನ್​ಎ’ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ರಿಲೀಸ್ ಆಗಿರಬೇಕಿತ್ತು. ಕರೊನಾ ಅದಕ್ಕೆ ಅನುವು ಮಾಡಿಕೊಡಲಿಲ್ಲ. ಇದೀಗ ಚಿತ್ರ ತೆರೆಮೇಲೆ ಬರುವುದಕ್ಕೆ ಸಿದ್ಧವಾಗಿದ್ದು, ಪ್ರಚಾರದ ಕೆಲಸಗಳು ಶುರುವಾಗಿವೆ.

    ಈ ಮಧ್ಯೆ, ಚಿತ್ರದಲ್ಲಿ ಯೋಗರಾಜ್ ಭಟ್ ಒಂದು ಹಾಡು ಹಾಡಿದ್ದು, ಅದಕ್ಕೆ ಅವರೇ ಧ್ವನಿಯನ್ನೂ ನೀಡಿದ್ದಾರೆ. ಭಟ್ಟರ ಜತೆಗೆ ಸತೀಶ್ ನೀನಾಸಂ ಮೈಕ್ ಹಿಡಿದು ಮೋಡಿ ಮಾಡಿದ್ದಾರೆ.ಈ ಹಾಡನ್ನು ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.ಮೈಲಾರಿ ನಿರ್ಮಾಣ ಮಾಡಿರುವ ‘ಡಿಎನ್​ಎ’ ಚಿತ್ರದಲ್ಲಿ ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ತರ್ ನರೋನ್ಹಾ, ಯಮುನಾ ಮುಖ್ಯಭೂಮಿಕೆಯಲ್ಲಿದ್ದಾರೆ. ಮಾಸ್ಟರ್ ಆನಂದ್ ಅವರ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ ಸಹ ನಟಿಸಿದ್ದಾನೆ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಎಸ್ತರ್, ‘ನಾನು ಕನ್ನಡದಲ್ಲಿ ಸಿನಿಮಾ ಬೇಕು ಅಂತ ತುಂಬ ದಿನಗಳಿಂದ ಕಾಯುತ್ತಿದ್ದೆ. ಈಗ ‘ಡಿಎನ್​ಎ’ ಮೂಲಕ ಗಟ್ಟಿ ಕಥೆಯೊಂದಿಗೆ ಬಂದಿದ್ದೇನೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ ನಡುವಿನ ಕಥೆ ಇದು’ ಎನ್ನುತ್ತಾರೆ.

    ರಾಜ್ಯದ ಹಲವೆಡೆ ಹತ್ತು ದಿನ ನೈಟ್ ಕರ್ಫ್ಯೂ; ನಿಯಮ ಪಾಲಿಸದಿದ್ದರೆ ಮುಂದಿದೆ ಲಾಕ್​ಡೌನ್​!?

    ಕರೊನಾ ಪರೀಕ್ಷೆಗೆ 200 ರೂ. ಪಡೆದ ಸರ್ಕಾರಿ ಆಸ್ಪತ್ರೆ ಡಾಕ್ಟರ್​; ಕೋಣನಕುಂಟೆ ಪಿಎಚ್‌ಸಿಯಲ್ಲಿ ಭ್ರಷ್ಟಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts