More

    ಕನ್ನಡ ಭಾಷೆ ಬೆಳೆಯುತ್ತಿದೆ, ಆತಂಕ ಬೇಡ: ಸಾಹಿತಿ ಪ್ರತಿಭಾ ನಂದಕುಮಾರ್ ಹೇಳಿಕೆ

    ಕೈಲಾಂಚ: ಕನ್ನಡ ಭಾಷೆ ಬೆಳವಣಿಗೆ ಆಗುತ್ತಿದೆ. ಕನ್ನಡಕ್ಕೆ ಯಾವುದೇ ಅಪಾಯವಿಲ್ಲ. ಆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾಹಿತಿ ಪ್ರತಿಭಾ ನಂದಕುಮಾರ್ ತಿಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಜಂಟಿಯಾಗಿ ಕೈಲಾಂಚ ಹೋಬಳಿಯ ಕೆರೆಮೇಗಳದೊಡ್ಡಿ ಮುದ್ದುಶ್ರೀ ದಿಬ್ಬದಲ್ಲಿ ಆಯೋಜಿಸಿರುವ ಮೂರು ದಿನಗಳ ಲಲಿತ ಪ್ರಬಂಧ ಕಮ್ಮಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ಕನ್ನಡಕ್ಕೆ ಸಾವಿಲ್ಲ. ಲಲಿತ ಪ್ರಬಂಧ ಮಾತಿನ ಮೂಲಕ ಮಂತ್ರಮುಗ್ಥರನ್ನಾಗಿಸುವ ಕಲೆ, ಇದು ಪ್ರಬಂಧದ ಬರವಣಿಗೆಯಲ್ಲೂ ಇರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಮರ್ಶೆಗಳು ಬರುತ್ತಿವೆ. ಮೂರು ದಿನಗಳ ಶಿಬಿರವನ್ನು ಶಿಬಿರಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

    ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಬಿ.ವಿ. ವಸಂತಕುಮಾರ್ ಮಾತನಾಡಿ, ಬರಹಕ್ಕಿಂತ ಬದುಕು ದೊಡ್ಡದು. ಇಲ್ಲಿನ ಪ್ರಕೃತಿ ಅನುಭವಿಸಿ ಸಾಹಿತ್ಯ ಸುಗಂಧವನ್ನು ಸವಿದು ಬರೆಯಿರಿ. ಭಾಷೆಗೆ ಒಂದು ಬಂಧವಿದೆ, ಅದನ್ನು ಸೊಗಸಾಗಿ ಬುದ್ಧಿ ಭಾವಗಳ ಸಂಬಂಧ ಕೂಡಿಸಿದ್ದೆ ಆದರೆ ಅದೇ ಒಂದು ಲಲಿತ ಪ್ರಬಂಧವಾಗುತ್ತದೆ ಎಂದರು.

    ಶಿಬಿರ ನಿರ್ದೇಶಕ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಕರೊನಾ ಕಾಲಘಟ್ಟದಲ್ಲೂ ಸಾಹಿತ್ಯ ಅಕಾಡೆಮಿ ಲಲಿತ ಪ್ರಬಂಧ ಕಮ್ಮಟ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅಕಾಡೆಮಿ ಸದಸ್ಯ ದತ್ತಗುರು ಸೀತಾರಾಮ ಹೆಗ್ಗಡೆ, ಸದಸ್ಯ ಸಂಚಾಲಕ ಡಾ. ಖಸಿ ರಾಮಚಂದ್ರ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಭೈರೇಗೌಡ, ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ, ಮಂಜುನಾಥ್ ಬಾದಾಮಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts