More

    ಸಂಭ್ರಮದಿಂದ ನಡೆದ ಕನ್ನಡ ಜ್ಯೋತಿರಥ ಯಾತ್ರೆ

    ಕಲಾದಗಿ: ಕರ್ನಾಟಕ ಸುವರ್ಣ ಸಂಭ್ರಮ-50ದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆ ಮಂಗಳವಾರ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು.

    ಸಂಜೆ 4 ಗಂಟೆಗೆ ಬಾಗಲಕೋಟೆಯಿಂದ ಆಗಮಿಸಿದ ಜ್ಯೋತಿ ರಥಯಾತ್ರೆಯನ್ನು ಗ್ರಾಮದ ಸಾಯಿಬಾಬಾ ಮಂದಿರ ಬಳಿ ಗ್ರಾಪಂ ಅಧ್ಯಕ್ಷರು, ಗಣ್ಯರು, ಕನ್ನಡ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಇಲಾಖೆ ಅಧಿಕಾರಿಗಳ, ಸಿಬ್ಬಂದಿ, ಶಾಲಾ ಕಾಲೇಜುಗಳ ಮುಖ್ಯಸ್ಥರ, ಶಿಕ್ಷಕರ, ಮಕ್ಕಳ ಸಮ್ಮುಖದಲ್ಲಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ ಬರಮಾಡಿಕೊಳ್ಳಲಾಯಿತು.

    ಬಳಿಕ ಗುರುಲಿಂಗೇಶ್ವರ ಶಾಲೆ, ಪಂಚಾಯಿತಿ, ಕೊಬ್ಬರಿ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ರಥಯಾತ್ರೆ ಸಂಚರಿಸಿತು. ಮಹಿಳೆಯರ ಕುಂಭಮೇಳ, ಮಕ್ಕಳ ಛದ್ಮವೇಷ, ಕನ್ನಡಪರ ಹಾಡುಗಳು, ಕೋಲಾಟ, ಲೇಜಿಮ್, ಡೊಳ್ಳು ವಾದನ, ಮಹಿಳಾ ಡೊಳ್ಳು ಕುಣಿತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

    ಎತ್ತಿನ ಬಂಡಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ,ವೇಷಭೂಷಣ ಧರಿಸಿದ್ದ ಬಾಲಕಿ ಎಲ್ಲರ ಗಮನ ಸೆಳೆದಳು. ಗ್ರಾಪಂ ಅಧ್ಯಕ್ಷ ಖಾತುನಬಿ ರೋಣ, ಉಪಾಧ್ಯಕ್ಷ ಕೀರಪ್ಪ ಮಾದರ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶಲ್ಲಿಕೇರಿ, ಕಸಾಪ ವಲಯ ಘಟಕ ಅಧ್ಯಕ್ಷ ಲಕ್ಷ್ಮಣ ಅಂಕಲಗಿ, ತಾಪಂ ಯೋಜನಾಧಿಕಾರಿ ಚಂದ್ರು ಹೊಸಮನಿ, ಪಿಎಸ್‌ಐ ಆರ್.ಎಲ್. ಮನ್ನಾಭಾಯಿ, ಉಪ ತಹಸೀಲ್ದಾರ್ ಸಂಗೀತಾ ಇಟಗಿ, ಪಿಡಿಒ ಬಿ.ಎಲ್. ಹವಾಲ್ದಾರ್, ಕಾರ್ಯದರ್ಶಿ ಎಂ.ಎಂ. ಪರಸನವರ, ಗ್ರಾಮ ಆಡಳಿತಾಧಿಕಾರಿ ಸಂತೋಷಕುಮಾರ ತೇಲಿ, ಶಿಕ್ಷಣ ಇಲಾಖೆ ವಲಯ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಹೆಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts