More

    ಖಗೋಳ ವಿಜ್ಞಾನದ ಮುಖ್ಯ ಸೂಚಕಗಳನ್ನು ಸಾಹಿತ್ಯ ಕಾಣಬಹುದು

    ಮೈಸೂರು: ಖಗೋಳ ವಿಜ್ಞಾನದ ಮುಖ್ಯ ಸೂಚಕಗಳನ್ನು ಸಾಹಿತ್ಯ, ಜಾನಪದ, ಚಿತ್ರಕಲೆ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲೂ ಕಾಣಬಹುದು ಎಂದು ಜವಾಹರಲಾಲ್ ನೆಹರು ತಾರಾಲಯದ ನಿವೃತ್ತ ನಿರ್ದೇಶಕಿ ಡಾ.ಬಿ.ಎಸ್.ಶೈಲಜಾ ತಿಳಿಸಿದರು.

    ಕಾಸ್ಮಾಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಖಗೋಳ ವಿಜ್ಞಾನ ಅಂದು-ಇಂದು ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಗಾದೆಗಳಿಗೂ ಖಗೋಳಕ್ಕೂ ನಂಟಿದೆ. ಗ್ರಹಣಗಳು ಕೂಡ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರವೇ. ಸೂರ್ಯಗ್ರಹಣ, ಚಂದ್ರಗ್ರಹಣಗಳನ್ನು ಕಾವ್ಯಗಳಲ್ಲಿ ಕಾಣಬಹುದು. ಕನಕದಾಸರ ಮೋಹನ ತರಂಗಿಣಿಯಲ್ಲೂ ಗ್ರಹಣದ ಉಲ್ಲೇಖವಿದೆ ಎಂದು ಮಾಹಿತಿ ನೀಡಿದರು.

    ಖಗೋಳ ವಿಜ್ಞಾನ ಜನಸಾಮಾನ್ಯರಿಗೂ ಅರ್ಥ ಮಾಡಿಸಬೇಕು

    ಜನಸಾಮಾನ್ಯರಿಗೂ ಖಗೋಳ ವಿಜ್ಞಾನವನ್ನು ಅರ್ಥ ಮಾಡಿಸಬೇಕಿದೆ. ರಾತ್ರಿಯ ಆಕಾಶ ಹುಟ್ಟುಹಾಕಿದ ಕುತೂಹಲ ಸಾವಿರಾರು ವರ್ಷಗಳಲ್ಲಿ ಬೆಳೆದು ಹೆಮ್ಮರವಾಗಿದೆ. ಬರಿಗಣ್ಣಿನ ವೀಕ್ಷಣೆಗಳಿಂದ ಆರಂಭವಾದ ಈ ಜ್ಞಾನ ದಾಖಲಾಗಿದ್ದು ಹೇಗೆ? ಭಿನ್ನ ಸಂಸ್ಕೃತಿಗಳಲ್ಲಿ ಖಗೋಳದ ಸಮಾನ ಚಿಂತನೆ ಮೂಡಿದ್ದು ಹೇಗೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ. ಈ ನಿಟ್ಟಿನಲ್ಲಿ ಭಾರತದ ಮೂಲೆ ಮೂಲೆಯಲ್ಲೂ ಕಂಡುಬರುವ ಶಾಸನಗಳು ಮತ್ತು ಹಳಗನ್ನಡ ಕಾವ್ಯಗಳ ಕೊಡುಗೆ ಗಮನಾರ್ಹವಾದದ್ದು. ಈ ಬಗೆಯ ಅಧ್ಯಯನ ಒದಗಿಸಿಕೊಟ್ಟಿರುವ ಅಮೂಲ್ಯ ವಿಚಾರಗಳನ್ನು ಹೆಚ್ಚು ಹೆಚ್ಚು ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.

    ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ವಿಜಯಕುಮಾರಿ ಎಸ್. ಕರಿಕಲ್ ಇದ್ದರು.

    ಮಾನಸ ಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಎಸ್.ಶೈಲಜಾ ಮಾತನಾಡಿದರು. ವಿಜಯ ಕುಮಾರಿ ಎಸ್. ಕರಿಕಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts