More

    ಕಾಣಿಯೂರು-ಮಾದೋಡಿ- ಬೆಳ್ಳಾರೆ ರಸ್ತೆ ಅವ್ಯವಸ್ಥೆ

    ಕಡಬ: ಕಾಣಿಯೂರು ಮಠದ ಜಂಕ್ಷನ್, ಭಜನಾ ಮಂದಿರದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ನೀರು ತುಂಬಿ ರಸ್ತೆ ಹೊಳೆಯಂತಿದೆ.
    ಕಾಣಿಯೂರಿನಿಂದ ಮಾದೋಡಿ ಮೂಲಕ ಪೆರುವಾಜೆ ಬೆಳ್ಳಾರೆಗೆ,ಅಬೀರ, ನೀರಜರಿ ಮೂಲಕ ಅಮೈ, ಪೆರ್ಲೋಡಿ ಹಾಗೂ ಪ್ರಗತಿ ವಿದ್ಯಾಸಂಸ್ಥೆ, ಶ್ರೀಲಕ್ಷ್ಮೀನರಸಿಂಹ ಭಜನಾ ಮಂದಿರಕ್ಕೆ ಸಂಪರ್ಕಿಸುವ ಸಾವಿರಾರು ಮಂದಿಗೆ ಇದರಿಂದ ತೊಂದರೆಯಾಗಿದೆ.

    ಮಳೆಗಾಲದಲ್ಲಿ ಕೆಸರು ನೀರಿದ್ದರೆ, ಬೇಸಗೆಯಲ್ಲಿ ಧೂಳಿನ ಕಿರಿಕಿರಿ. ತಕ್ಷಣ ಪೂರ್ಣ ಪ್ರಮಾಣದ ಡಾಂಬರು ಕಾಮಗಾರಿ ನಡೆಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

    ಗುದ್ದಲಿಪೂಜೆ ನಡೆದು 2 ವರ್ಷ: ರೈಲ್ವೆ ಸೇತುವೆ ಕೆಳಗಿನಿಂದ ಮಾದೋಡಿ ಕಾಣಿಯೂರು ಸಂಪರ್ಕಿಸುವ ರಸ್ತೆ ಲಘು ವಾಹನಗಳಿಗೆ ಅಷ್ಟೆ. ಅಲ್ಲದೇ ಮಳೆಗಾಲದಲ್ಲಿ ಉಪಯೋಗಿಸಲಾಗುವುದಿಲ್ಲ. ಇಲ್ಲಿ ತಡೆಗೋಡೆ ನಿರ್ಮಿಸಲು ಸ್ಥಳೀಯ ಜನಪ್ರತಿನಿಧಿಗಳು ಪ್ರಯತ್ನಿಸಿದಾಗ ರೈಲ್ವೆ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಆದರೆ ರೈಲ್ವೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿಲ್ಲ. ಈ ಕಡೆಯ ಜನರಿಗೆ ಸರ್ವಋತು ಮಾರ್ಗವೆಂದರೆ ಕಾಣಿಯೂರು ಮಠದ ಜಂಕ್ಷನ್‌ನಿಂದ ಭಜನಾ ಮಂದಿರ ಮೂಲಕ ಪ್ರಗತಿ ಶಾಲೆಯ ಕಡೆಗೆ ಬರುವ ಈ ರಸ್ತೆ 2007ರಿಂದ ದುಸ್ಥಿತಿಯಲ್ಲಿದೆ. ಸಚಿವ ಎಸ್ ಅಂಗಾರ ಅವರು ಅಕ್ಟೋಬರ್ 2019ರಲ್ಲಿ 800 ಮೀಟರ್ ದೂರದ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಕಾಮಗಾರಿ ನಡೆದಿಲ್ಲ.

    ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಮಂಜೂರಾತಿಗೆ ವಿಳಂಬವಾಗಿದೆ. ಈಗ 30 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, 15 ದಿವಸದೊಳಗೆ ಕಾಮಗಾರಿ ಪ್ರಾರಂಭಗೊಳ್ಳಲಿದೆ.
    – ಗಣೇಶ್ ಉದನಡ್ಕ, ಕಾಣಿಯೂರು ಗ್ರಾಪಂ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts