More

    ಪೊಲೀಸರು ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದ ಕಂಗನಾ

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣವನ್ನು ಮುಂಬೈ ಪೊಲೀಸರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಇಲ್ಲಿಯವರೆಗೂ 28 ಜನರನ್ನು ವಿಚಾರಣೆ ನಡೆಸಿದ್ದಾರೆ.

    ಈ ಪೈಕಿ ಸುಶಾಂತ್​ ಸಿಂಗ್​ ಕುಟುಂಬದವರು, ಆಪ್ತರು, ಮನೆಗೆಲಸದವರು, ಚಿತ್ರರಂಗದವರು ಸಹ ಸೇರಿದ್ದಾರೆ. ಇತ್ತೀಚೆಗಷ್ಟೇ, ನಿರ್ದೇಶಕ ಮತ್ತು ನಿರ್ಮಾಪಕ ಸಂಜಯ್​ ಲೀಲಾ ಬನ್ಸಾಲಿ ಅವರಿಗೂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಕಳಿಸಿದ್ದರು ಎಂಬ ದೊಡ್ಡ ಸುದ್ದಿಯಾಗಿತ್ತು. ಈಗ ನಟಿ ಕಂಗನಾ ರಣಾವತ್​ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸ್​ ಸಮನ್ಸ್​ ಕಳಿಸಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಅಮ್ಮನಿಗೆ ಹಾರ್ಟ್​ ಆಪರೇಷನ್​ ಮಾಡಿಸಿದ್ದು ಸಲ್ಮಾನ್​ … ಥ್ಯಾಂಕ್ಸ್​ ಹೇಳಿದ ಸರೋಜ್​ ಪುತ್ರಿ

    ಇಷ್ಟಕ್ಕೂ ಸುಶಾಂತ್​ ಆತ್ಮಹತ್ಯೆ ಪ್ರಕರಣಕ್ಕೂ, ಕಂಗನಾ ರಣಾವತ್​ ಅವರಿಗೂ ಸಂಬಂಧವೇನು ಎಂಬ ಪ್ರಶ್ನೆ ಸಹಜವೇ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅವರಿಗೆ ದೊಡ್ಡ ಮಟ್ಟದಲ್ಲಿ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದು ಅದೇ ಕಂಗನಾ. ಬಾಲಿವುಡ್​ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತದ ಕುರಿತಾಗಿ ಪ್ರಸ್ತಾಪಿಸಿದ್ದ ಕಂಗನಾ, ಅದೇ ನೆಪೋಟಿಸಂನಿಂದ ಸುಶಾಂತ್ ಆತ್ಮಹತ್ಯೆಯ ದಾರಿ ತುಳಿಯಬೇಕಾಯಿತು ಎಂದು ಹೇಳಿದ್ದರು.

    ಅವರ ಹೇಳಿಕೆಯ ನಂತರ ಬಾಲಿವುಡ್​ನಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿದ್ದು, ಸ್ವಜನಪಕ್ಷಪಾತದ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಅಸಹನೆ ವ್ಯಕ್ತವಾಗಿತ್ತು. ಅದರಲ್ಲೂ ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಲಾಗುವ ಕರಣ್​ ಜೋಹಾರ್​ ವಿರುದ್ಧ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿದ್ದವು. ಇನ್ನು ಅವರು ಚಿತ್ರರಂಗಕ್ಕೆ ಪರಿಚಯಿಸಿದ ಆಲಿಯಾ ಭಟ್​, ವರುಣ್​ ಧವನ್​ ಮುಂತಾದವರ ಬಗ್ಗೆಯೂ ಟೀಕೆಗಳು ಕೇಳಿ ಬಂದವು.

    ಇದನ್ನೂ ಓದಿ: ಬಾಲಿವುಡ್​ನಲ್ಲಿ ಸಿನಿಮಾ ಆಗಲಿದೆ ಗಲ್ವಾನ್​ ದಾಳಿ!

    ಈ ಸ್ವಜನಪಕ್ಷಪಾತದ ವಿಷಯವಾಗಿಯೇ ಕಂಗನಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ. ಈ ಸುದ್ದಿ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಇದುವರೆಗೂ ಕಂಗನಾಗೆ ಯಾವುದೇ ರೀತಿಯ ಸಮನ್ಸ್​ ಅಂತೂ ಹೋಗಿಲ್ಲ.

    ಒಂದು ಪಕ್ಷ ಸುಶಾಂತ್​ ಸಾವಿನ ವಿಷಯದಲ್ಲಿ ವಿಚಾರಣೆಗೆ ಪೊಲೀಸರು ಕರೆದರೆ, ತಾವು ವಿಚಾರಣೆಗೆ ಬರಲು ಸಿದ್ಧ ಎಂದು ಕಂಗನಾ ರಣಾವತ್​ ಸಹ ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಅವರ ಹೇಳಿಕೆಯನ್ನು ಅವರ ಮಾಧ್ಯಮ ತಂಡವು ಬಿಡುಗಡೆ ಮಾಡಿದೆ.

    ‘ಗ್ರಾಮಾಯಣ’ ಬಿಡುಗಡೆಗೂ ಮುನ್ನವೇ ನಿರ್ಮಾಪಕ ಮೂರ್ತಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts