More

    ಲಾಕ್‌ಡೌನ್‌ನಲ್ಲಿ ಸ್ಲಿಮ್ ಆದ ಕಂಗನಾ … ಎಷ್ಟು ಕೆಜಿ ತೂಕ ಇಳಿಸಕೊಂಡರು ಗೊತ್ತಾ?

    ಲಾಕ್‌ಡೌನ್ ಸಂದರ್ಭದಲ್ಲಿ ಸೆಲೆಬ್ರಿಟಿಗಳಿಗೆ ಸುಮ್ಮನೆ ಕೂರಲಿಕ್ಕಾಗದೆ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಲಾಕ್‌ಡೌನ್ ಸಮಯವನ್ನು ಕಂಗನಾ ಹೇಗೆ ಬಳಸಿಕೊಂಡಿದ್ದಾರೆ ಗೊತ್ತಾ? ಸಖತ್ ವರ್ಕೌಟ್ ಮಾಡಿ, ಐದು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈಗ ಇನ್ನಷ್ಟು ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ.

    ಲಾಕ್‌ಡೌನ್ ಸಂದರ್ಭವನ್ನು ಕಂಗನಾ ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಲಾಕ್‌ಡೌನ್ ೋಷಿಸುವುದಕ್ಕಂತ ಮುನ್ನ, ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶಕ್ಕೆ ಹೋಗಿಬಿಟ್ಟಿದ್ದರು. ಅಲ್ಲಿ ತಮ್ಮ ಕುಟುಂಬದವರ ಜತೆಗೆ ಕಾಲಕಳೆಯುತ್ತಿರುವ ಕಂಗನಾ, ಪ್ರತಿ ದಿನ ವರ್ಕೌಟ್ ಮಾಡುವುದನ್ನು ಮುಂದುವರೆಸಿದ್ದಾರೆ. ಹೀಗೆ ವರ್ಕೌಟ್ ಮಾಡಿಯೇ ಸುಮಾರು ಐದು ಕೆಜಿ ತೂಕವನ್ನು ಅವರು ಇಳಿಸಿದ್ದಾರಂತೆ. ಪ್ರತಿ ದಿನ ಟ್ರೈನರ್ ಒಬ್ಬರು ಬಂದು, ಕಂಗನಾ ವರ್ಕೌಟ್ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದಾರಂತೆ. ಇತ್ತೀಚೆಗೆ ತಾವು ವರ್ಕೌಟ್ ಮಾಡುತ್ತಿರುವ ವೀಡಿಯೋವೊಂದನ್ನು ಕಂಗನಾ, ಇನ್‌ಸ್ಟಾಗ್ರಾಂ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

    ಒಂಧರ್ಥದಲ್ಲಿ ಕಂಗನಾ ಇಂಥದ್ದೊಂದು ಸಮಯ ಬೇಕಿತ್ತು. ಏಕೆಂದರೆ, ಇತ್ತೀಚೆಗಷ್ಟೇ ಅವರು ‘ಥಲೈವಿ’ ಎಂಬ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ಕಂಗನಾ, ಜಯಲಲಿತಾ ಅವರ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಲಾಕ್‌ಡೌನ್ ನಂತರ ಬಿಡುಗಡೆಯಾಗಲಿದೆ. ಈ ಮಧ್ಯೆ, ‘ಧಾಕಡ್’ ಎಂಬ ಚಿತ್ರವನ್ನು ಕಂಗನಾ ಒಪ್ಪಿದ್ದು, ಆ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಅವರು ತೂಕ ಇಳಿಸಬೇಕಿತ್ತು. ಈ ಲಾಕ್‌ಡೌನ್ ಸಮಯವನ್ನು ಅದಕ್ಕೆ ಬಳಸಿಕೊಂಡಿರುವ ಕಂಗನಾ, ಇನ್ನಷ್ಟು ಸಪೂರವಾಗಿದ್ದಾರೆ.

    ಏಪ್ರಿಲ್ 13ರಿಂದ ಮತ್ತೆ ಬಿಗ್ ಬಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts