More

    ಏಪ್ರಿಲ್ 13ರಿಂದ ಮತ್ತೆ ಬಿಗ್ ಬಾಸ್

    ಬೆಂಗಳೂರು: ಇಡೀ ದೇಶವೇ ಲಾಕ್​ಡೌನ್ ಆಗಿ, ಎಲ್ಲರೂ ಮನೆಯಲ್ಲಿ ಕೂರುವಂತಾಗಿದೆ. ಈಗಿನ ಪರಿಸ್ಥಿತಿಯನ್ನು ಎಲ್ಲರೂ ಹೋಲಿಸುತ್ತಿರುವುದು ‘ಬಿಗ್ ಬಾಸ್’ ಕಾರ್ಯಕ್ರಮದ ಜತೆಗೆ. 15 ದಿನಗಳ ಕಾಲ ಮನೆಯಲ್ಲಿದ್ದು ಜನ ಹೈರಾಣಾಗಿದ್ದಾರೆ. ಪರಿಚಿತ ಜನರ ಜತೆಗೆ ಎಲ್ಲಾ ಸೌಲಭ್ಯಗಳ ಜತೆಗಿರುವುದೇ ಕಷ್ಟವಾಗಿರುವಾಗ, ‘ಬಿಗ್ ಬಾಸ್’ ಮನೆಯಲ್ಲಿ ಅಪರಿಚಿತರ ಜತೆಗೆ, ಹೇಗೆ ಬದುಕಬಹುದು ಯೋಚಿಸಿ?

    ಈಗ್ಯಾಕೆ ‘ಬಿಗ್ ಬಾಸ್’ನ ವಿಷಯ ಎಂದರೆ, ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಲಾಟಿ ಶೋ ಇದೀಗ ಕಲರ್ಸ್​ನಲ್ಲಿ ಮರುಪ್ರಸಾರವಾಗುವುದಕ್ಕೆ ಸಜ್ಜಾಗಿದೆ.ಹೌದು, ಇಷ್ಟು ದಿನಗಳ ಕಾಲ ಕನ್ನಡಿಗರ ಮನರಂಜಿಸುತ್ತಿದ್ದ ಕಲರ್ಸ್ ಕನ್ನಡ, ದೇಶ ಲಾಕ್​ಡೌನ್ ಆಗಿರುವ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕುಳಿತಿರುವ ಜನರನ್ನು ಮನರಂಜಿಸಲು ಹೊಸ ಹೆಜ್ಜೆ ಇಟ್ಟಿದೆ. ತನ್ನ ಹಳೆಯ ಕಾರ್ಯಕ್ರಮಗಳ ಖಜಾನೆ ತೆಗೆದು, ಏಪ್ರಿಲ್ 13ರಿಂದ ಅತ್ಯುತ್ತಮವಾದ ಧಾರಾವಾಹಿ ಮತ್ತು ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿದೆ.

    ಬ್ಯಾಕ್ ಟು ಬ್ಯಾಕ್ ನೋಡಬಹುದು: ಇನ್ನು ಏಪ್ರಿಲ್ 13ರಿಂದ ಕಲರ್ಸ್ ಕನ್ನಡದ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ವೀಕ್ಷಕರು ಮತ್ತೊಮ್ಮೆ ಸವಿಯಬಹುದಾಗಿದೆ. ಬೆಳಿಗ್ಗೆ 9ಕ್ಕೆ ‘ಅಗ್ನಿಸಾಕ್ಷಿ’ಯಿಂದ ದಿನಚರಿ ಶುರುವಾಗಲಿದ್ದು, ಆ ನಂತರ ‘ಸಿಲ್ಲಿ ಲಲ್ಲಿ’ (10ಕ್ಕೆ), ‘ಪಾಪ ಪಾಂಡು (10.30ಕ್ಕೆ), ‘ಮಜಾ ಟಾಕೀಸ್’ (ಮಧ್ಯಾಹ್ನ 1ಕ್ಕೆ), ‘ಶನಿ’ (ಸಂಜೆ 5ಕ್ಕೆ), ‘ಬಿಗ್ ಬಾಸ್’ (6ಕ್ಕೆ), ‘ಕನ್ನಡತಿ’ (ರಾತ್ರಿ 7.30ಕ್ಕೆ), ‘ಗೀತಾ’ (8ಕ್ಕೆ), ‘ನನ್ನರಸಿ ರಾಧೆ (8.30ಕ್ಕೆ), ‘ಮಜಾ ಭಾರತ’ (9ಕ್ಕೆ) ಮತ್ತು ‘ಹಾಡು ಕರ್ನಾಟಕ’ (10ಕ್ಕೆ) ಪ್ರಸಾರವಾಗಲಿದೆ.

    ಹಳೆಯದರ ಜತೆ ಹೊಸ ಎಪಿಸೋಡ್​ಗಳು: ಹಳೆಯ ಧಾರಾವಾಹಿಗಳ ಜತೆಗೆ, ಚಾನಲ್​ನ ಜನಪ್ರಿಯ ಧಾರಾವಾಹಿಯ ಹೊಸ ಎಪಿಸೋಡ್​ಗಳು ಸಹ ಪ್ರಸಾರವಾಗಲಿದೆ ಎಂಬುದು ಗಮನಾರ್ಹ. ಈ ಪೈಕಿ ‘ಗೀತಾ’ ಧಾರಾವಾಹಿಯ ಹೊಸ ಕಂತುಗಳು ಈಗಾಗಲೇ ಪ್ರಸಾರವಾಗುತ್ತಿದ್ದು, ನಾಯಕಿ ಗೀತಾ ಮತ್ತು ನಾಯಕ ವಿಜಯ್ ಮಧ್ಯೆ ನಡೆಯುವ ಜಟಾಪಟಿಯು ಕುತೂಹಲಕಾರಿ ಘಟ್ಟದಲ್ಲಿದೆ. ಈ ಧಾರಾವಾಹಿಯ ಹೊಸ ಎಪಿಸೋಡ್​ಗಳು ಎಂದಿನಂತೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

    ಇಂದು ಮತ್ತು ನಾಳೆ ಅನುಬಂಧ: ಮೊದಲ ಹೆಜ್ಜೆಯಾಗಿ ಇಂದು ಮತ್ತು ನಾಳೆ, ಸಂಜೆ ಆರು ಗಂಟೆಗೆ ಕಳೆದ ವರ್ಷದ ‘ಅನುಬಂಧ’ ಅವಾರ್ಡ್ಸ್ ಕಾರ್ಯಕ್ರಮ ಮರುಪ್ರಸಾರವಾಗಲಿದೆ. ಕಲರ್ಸ್ ಕನ್ನಡದ ಎಲ್ಲಾ ಕಲಾವಿದರು ಒಂದೆಡೆ ಸೇರಿ ಸಂಭ್ರಮಿಸುವ ಈ ಹಬ್ಬದಲ್ಲಿ, ಕನ್ನಡ ಚಿತ್ರರಂಗದ ದಿಗ್ಗಜರೂ ಒಟ್ಟಾಗುತ್ತಾರೆ. ಜನಪ್ರಿಯತೆ ಮತ್ತು ರೇಟಿಂಗ್ ಎರಡರಲ್ಲೂ ಮುಂದಿರುವ ಈ ಕಾರ್ಯಕ್ರಮ, ಲಾಕ್​ಡೌನ್ ಸಂದರ್ಭದಲ್ಲಿ ಮತ್ತೆ ನಿಮ್ಮ ಮುಂದೆ ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts