More

    ವೋಟರ್ ಐಡಿ ಲಿಂಕ್ ಮಾಡಲು ವಿದ್ಯಾರ್ಥಿಗಳ ಬಳಕೆ; ದಾಖಲೆಗಳನ್ನು ತರುವಂತೆ ಕಳುಹಿಸುತ್ತಿರುವ ಶಿಕ್ಷಕಿ

    ಕನಕಗಿರಿ: ಮತದಾರರ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ತಾಲೂಕಿನ ಆದಾಪುರದ ಬಿಎಲ್‌ಒ ಆಗಿರುವ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳನ್ನು ಬಳಸುತ್ತಿರುವ ಆರೋಪ ಕೇಳಿ ಬಂದಿದೆ.

    ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸಲು ಸೂಚಿಸಿದೆ. ಅದರಂತೆ ಕೆಲ ಸುಶಿಕ್ಷಿತರು ಆ್ಯಪ್‌ನಲ್ಲಿ ಆಧಾರ್ ಲಿಂಕ್ ಮಾಡಿದರೆ, ಇನ್ನುಳಿದವರನ್ನು ಬಿಎಲ್‌ಒಗಳೇ ನಿರ್ವಹಣೆ ಮಾಡಬೇಕು. ಮತದಾರರ ಆಧಾರ್ ಕಾರ್ಡ್ ಸಂಗ್ರಹಿಸಿ, ಅದನ್ನು ವೋಟರ್ ಐಡಿಗೆ ಲಿಂಕ್ ಮಾಡಬೇಕಾದ ಜವಾಬ್ದಾರಿ ಬಿಎಲ್‌ಒಗಳದ್ದಾಗಿದೆ. ಆದರೆ, ಆದಾಪುರದ ಶಿಕ್ಷಕಿ ಶಾಲಾವಧಿಯಲ್ಲಿ ಮಕ್ಕಳನ್ನು ಆಧಾರ್ ಕಾರ್ಡ್ ಸಂಗ್ರಹಕ್ಕೆ ಬಳಸುತ್ತಿದ್ದಾರೆ ಎಂದು ಫೋಟೊ ಸಹಿತ ತಹಸಿಲ್ ಮತ್ತು ಬಿಇಒ ಕಚೇರಿಗಳಿಗೆ ಮುಖ್ಯ ಶಿಕ್ಷಕರೇ ಪತ್ರ ಬರೆದಿದ್ದಾರೆ.

    ಆಧಾರ್ ಕಾರ್ಡ್ ಸಂಗ್ರಹಿಸಲು ಮಕ್ಕಳನ್ನು ಮನೆಮನೆಗೆ ಕಳುಹಿಸಲಾಗುತ್ತಿದೆ. ಪಾಲಕರು ಫೋಟೊ ಸಹಿತ ಶಾಲೆಗೆ ಬಂದು ನಮ್ಮ ಮಕ್ಕಳ ಶಿಕ್ಷಣ ಹಾಳಾಗುತ್ತಿದೆ ಎಂದು ದೂರಿದ್ದಾರೆ. ಜತೆಗೆ ಶಿಕ್ಷಕಿ ಪಾಠವೂ ಮಾಡುತ್ತಿಲ್ಲ. ಶಾಲಾ ವೇಳೆಯಲ್ಲಿ ಬರೀ ಮೊಬೈಲ್‌ನಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ ಎಂದು ಪತ್ರ ಬರೆಯಲಾಗಿದೆ.

    ಶಾಲೆ ಮುಖ್ಯಶಿಕ್ಷಕ ರಜನಿಕಾಂತ ಹಾಗೂ ಶಿಕ್ಷಕಿ ನಡುವೆ ಹಲವು ದಿನಗಳಿಂದ ವೈಯಕ್ತಿಕ ಮುನಿಸು ಇತ್ತು ಎನ್ನಲಾಗಿದೆ. ಈಗ ಬೀದಿಗೆ ಬಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಶಿಕ್ಷಕರ ದಿನಾಚರಣೆ ಮುನ್ನವೇ ಸೆ.3ರಂದು ಶಾಲೆಯಲ್ಲಿ ಸಾರ್ವಜನಿಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಸಿಆರ್‌ಪಿಗಳ ಮುಂದೆಯೇ ಇವರಿಬ್ಬರೂ ಜಗಳವಾಡಿದ್ದಾರೆ ಎಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.

    ಮುಖ್ಯಶಿಕ್ಷಕ ಸಂಬಂಧಿಸಿದ ಫೋಟೊಗಳೊಂದಿಗೆ ಪತ್ರ ಬರೆದಿದ್ದಾರೆ. ಶಿಕ್ಷಕಿ ವಿರುದ್ಧ ಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ.
    | ಧನಂಜಯ ಮಾಲಗಿತ್ತಿ, ತಹಸೀಲ್ದಾರ್, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts