More

    ಕನಕಾಚಲ ದೇಗುಲದಲ್ಲಿ ಲಕ್ಷ ದೀಪೋತ್ಸವ

    ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಪ್ರಥಮ ಬಾರಿಗೆ ಕಾರ್ತಿಕ ಅಮಾವಾಸ್ಯೆ ನಿಮಿತ್ತ ಲಕ್ಷ ದೀಪೋತ್ಸವ ಮಂಗಳವಾರ ಆಚರಿಸಲಾಯಿತು.

    ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ನಡೆಯಿತು. ವಿವಿಧೆಡೆಯಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಇವರಿಗೆ ಸಮಿತಿಯಿಂದಲೇ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ದೇವಸ್ಥಾನದಲ್ಲಿ ಪ್ರಣತಿಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಬೆಳಗಿಸಲಾಯಿತು. ಹಲವು ಭಕ್ತರು ಓಂ ಶ್ರೀ, ಕನಕಾಚಲನ ಹೆಸರು ಬರೆದು ಅದರ ಮೇಲೆ ದೀಪ ಬೆಳಗಿಸಿದರು.

    ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ರಾಜ್ಯವಲ್ಲದೆ ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣದಿಂದಲೂ ಭಕ್ತರು ಆಗಮಿಸಿದ್ದರು. ಮರುಳಿ ಕೃಷ್ಣ ಕೋಲಾಟ ತಂಡದಿಂದ ಕೋಲಾಟ, ಶಂಕ್ರಪ್ಪ ಬಿನ್ನಾಳ ಶಿಷ್ಯರಿಂದ ಭಕ್ತಿ ಸುಧೆ, ಕನಕಾಚಲ ಭಜನಾ ಮಂಡಳಿಯಿಂದ ಭಜನಾ ಹಾಡುಗಳು, ವೆಂಕಟೇಶ ಹಾಗೂ ಅಂತಾರಾಷ್ಟ್ರೀಯ ಗಾಯಕ ಹುಸೇನದಾಸರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಈಡೇರಿದ ಭಕ್ತರ ಆಸೆ: ಕಾರ್ತಿಕ ಮಾಸದಲ್ಲಿ ಲಕ್ಷ ದಿಪೋತ್ಸವ ನಡೆಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು. ಆದರೆ, ಕರೊನಾ, ನೂತನ ರಥ ಹೀಗೆ ನಾನಾ ಕಾರಣಗಳಿಂದ ಆಚರಿಸಲಾಗಿರಲಿಲ್ಲ. ಈ ವರ್ಷ ಅದು ಸಾಧ್ಯವಾಗಿದ್ದಕ್ಕೆ ಭಕ್ತರು ಹರ್ಷಿತರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts