More

    ಪರ್ಮಿಟ್‌ಗಿಂತ ಹೆಚ್ಚುವರಿ ಮರಳು ಸಾಗಣೆ; ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಮೂರು ಟಿಪ್ಪರ್ ವಶ

    ಕನಕಗಿರಿ: ತಾಲೂಕಿನ ಮರಳು ಯಾರ್ಡ್‌ನಿಂದ ಟಿಪ್ಪರ್‌ಗಳಲ್ಲಿ ಪರ್ಮಿಟ್‌ಗಿಂತ ಹೆಚ್ಚಾಗಿ ಮರಳು ತುಂಬಿ ನೆರೆಯ ಜಿಲ್ಲೆಗಳಿಗೆ ಸಾಗಿಸುತ್ತಿದ್ದ ಮೂರು ಟಿಪ್ಪರ್‌ಗಳನ್ನು ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಅನುಮತಿ ಪಡೆದದ್ದಕ್ಕಿಂತ ಹೆಚ್ಚಾಗಿ ಮರಳು ತುಂಬಿಕೊಂಡಿದ್ದ 2 ಟಿಪ್ಪರ್‌ಗಳು ಹೊಸಪೇಟೆ ಕಡೆಗೆ ಮತ್ತೊಂದು ಬೇರೆಡೆಗೆ ತೆರಳುತ್ತಿದ್ದವು. ಇಲ್ಲಿನ ವೇ ಬ್ರಿಡ್ಜ್‌ನಲ್ಲಿ ಮರಳಿನ ತೂಕ ಮಾಡಿಸಿ ವಶಪಡಿಸಿಕೊಂಡ ಟಿಪ್ಪರ್‌ಗಳನ್ನು ಸ್ಥಳೀಯ ಠಾಣೆಯಲ್ಲಿರಿಸಲಾಗಿದೆ.

    ಪ್ರತಿ ಟಿಪ್ಪರ್‌ನಲ್ಲಿ 5ರಿಂದ 6 ಟನ್ ಹೆಚ್ಚುವರಿ ಮರಳು ಇರುವ ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿದೆ. ಇದಲ್ಲದೆ, ಕನಕಗಿರಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಮಾಹಿತಿ ಇದ್ದು, ದಾಳಿ ಮಾಡಲು ಬಂದಾಗ ವಿಷಯ ಅರಿತು ಅಕ್ರಮವಾಗಿ ಮರಳು ಸಾಗಿಸುವವರು ದಂದೆ ನಿಲ್ಲಿಸುತ್ತಾರೆ. ಸ್ಥಳೀಯ ಅಧಿಕಾರಿಗಳು ದಾಳಿ ಮಾಡಲು ಹಿಂಜರಿಯುತ್ತಿದ್ದಾರೆ. ಹಲವು ಬಾರಿ ದಾಳಿ ನಡೆಸಿ ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ. ಇನ್ಮುಂದೆಯೂ ಅಕ್ರಮ ಮರಳು ಸಾಗಣೆ ತಡೆಗೆ ಪ್ರಯತ್ನಿಸಲಾಗುವುದು ಎಂದು ಭೂ ವಿಜ್ಞಾನಿ ಸನಿತ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts