More

    ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಖಂಡನೆ: ಕನಕಗಿರಿಯಲ್ಲಿ ರೈತ ಸಂಘ-ಹಸಿರು ಸೇನೆ ಪ್ರತಿಭಟನೆ

    ಕನಕಗಿರಿ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

    ಸಂಘದ ಕಾರ್ಯದರ್ಶಿ ಭೀಮನಗೌಡ ಜೀರಾಳ ಮಾತನಾಡಿ, ಮಾತೆತ್ತಿದರೆ ರೈತರೇ ದೇಶದ ಬೆನ್ನೆಲುಬು ಎಂದು ಹೇಳುವ ರಾಜ್ಯ ಸರ್ಕಾರವು ಜಮೀನುಗಳಲ್ಲಿನ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸಿದೆ. ಈ ಮೂಲಕ ಈಗಾಗಲೇ ಕೃಷಿಯಿಂದ ಬೇಸತ್ತಿರುವ ರೈತರಿಗೆ ಬೇಸಾಯದ ಕಡೆಗೆ ತಿರುಗಿ ನೋಡದಂತೆ ಮಾಡಲು ಮುಂದಾಗಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ನಡುವೆ ಸರ್ಕಾರ ಮೀಟರ್ ಅಳವಡಿಸಲು ಮುಂದಾಗಿರುವುದು ರೈತರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸವಾಗಿದೆ. ಕೃಷಿ ಸಾಲ ಮನ್ನಾ ಮಾಡುವುದು ಬೇಡ. ಅದರ ಬದಲು ಸಮರ್ಪಕ ರಸಗೊಬ್ಬರ, ಬೀಜ, ನೀರು ಹಾಗೂ ಉಚಿತ ವಿದ್ಯುತ್, ಬೆಳ ಎಂಎಸ್‌ಪಿ ಘೋಷಿಸಿದರೆ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಲಿದ್ದಾರೆ ಎಂದರು. ತಹಸೀಲ್ದಾರ್ ಧನಂಜಯ ಮಾಲಗಿತ್ತಿಗೆ ಮನವಿ ಸಲ್ಲಿಸಲಾಯಿತು.

    ಮುಖಂಡರಾದ ಶಿವಕುಮಾರ ಬಡಿಗೇರ, ಯಮನೂರಪ್ಪ ಬಂಗಾರಿ, ಮರಿಸ್ವಾಮಿ, ವೆಂಕಟೇಶ ಮಲ್ಲಿಗೆವಾಡ, ಜಡಿಯಪ್ಪ ನಿರ್ಲೂಟಿ, ಶೇಖರಪ್ಪ ಗದ್ದಿ, ಹನುಮೇಶ ಪೂಜಾರಿ, ಹನುಮಂತಪ್ಪ ಬಂಡ್ರಾಳ, ಹುಲಗಪ್ಪ, ತಿಮ್ಮನಗೌಡ, ರಾಜಾಸಾಬ್, ಬಾಲರಾಜ್, ನಾಗಪ್ಪ, ಈರಣ್ಣ ಗಾಣದಾಳ, ಈಶಪ್ಪ ಹೊಸ್ಕೇರಾ, ಹನುಮಂತ ಹೊಸ್ಕೇರಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts