More

    ಶಾಸಕರ ಅನುದಾನದಲ್ಲಿ ಸೌಲಭ್ಯ ಕಲ್ಪಿಸಿ: ಕನಕಗಿರಿ ವಿಕಲಚೇತನರ ಸಂಘದ ತಾಲೂಕು ಘಟಕ ಆಗ್ರಹ

    ಕನಕಗಿರಿ: ಶಾಸಕರ ಅನುದಾನದಲ್ಲಿ ಅಂಗವಿಕಲರಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ವಿಕಲಚೇತನರ ಸಂಘದ ತಾಲೂಕು ಘಟಕ ಗುರುವಾರ ಎಂಎಲ್‌ಎ ಬಸವರಾಜ ದಢೇಸುಗೂರುಗೆ ಬರೆದ ಮನವಿ ಪತ್ರವನ್ನು ಆಪ್ತ ಸಹಾಯಕಗೆ ಸಲ್ಲಿಸಿದರು.

    ತಾಲೂಕು ಘಟಕದ ಅಧ್ಯಕ್ಷ ರಾಮಪ್ಪ ರಾಠೋಡ್ ಮಾತನಾಡಿ, ಶಾಸಕರಿಗೆ ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಈವರೆಗೆ ಅಂಗವಿಕಲರ ಕಲ್ಯಾಣಕ್ಕೆ ಬಳಕೆ ಮಾಡಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನರಿಗೆ ತ್ರಿಚಕ್ರ ವಾಹನ ನೀದ್ದಾರೆ. ನೇರಸಾಲ, ಗಂಗಾ ಕಲ್ಯಾಣ, ವಸತಿ ಯೋಜನೆ, ಆರೋಗ್ಯ ನಿಧಿಗೆ ಅನುದಾನ ಬಳಕೆ ಮಾಡಿಲ್ಲ. ಅಲ್ಲದೇ, ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಭೆ ನಡೆಸಿಲ್ಲ. ಇದರಿಂದ ತಾಲೂಕಿನ ಅಂಗವಿಕಲರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಅಂಗವಿಕಲರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗವುದು ಎಂದು ಎಚ್ಚರಿಕೆ ನೀಡಿದರು.

    ಖಜಾಂಚಿ ರಾಮಣ್ಣ ಕುರಿ, ಕಾರ್ಯದರ್ಶಿ ಲಕ್ಷ್ಮಣ ಜಿ.ವಿ., ವೆಂಕೋಬಪ್ಪ, ವೀರಭದ್ರಪ್ಪ ಕನಕಗಿರಿ, ಅಶೋಕ ಹುಲಸನಟ್ಟಿ, ಬಸವರಾಜ ಗುನ್ನಾಳ, ಹನುಮೇಶ ಅಡವಿಬಾವಿ, ಷಣ್ಮುಖಪ್ಪ ಸುಳೇಕಲ್, ಕುಂಟೆಪ್ಪ ಜೀರಾಳ, ಬುಡನ್‌ಸಾಬ್ ಹುಲಿಹೈದರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts