More

    ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸುವುದಾಗಿ ಹೇಳಿದ ಪಪಂ ಆಡಳಿತಾಧಿಕಾರಿ

    ರವಿ ಅಂಗಡಿ ಭರವಸೆ ಶ್ರೀಕನಕಾಚಲ ಲಕ್ಷ್ಮಿನರಸಿಂಹ ಜಾತ್ರಾ ಪೂರ್ವಭಾವಿ ಸಭೆ

    ಕನಕಗಿರಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದ ಮಹಾ ರಥೋತ್ಸವವು ಮಾ.16 ರಂದು ನಡೆಯಲಿದ್ದು, ಪಟ್ಟಣದ 17 ವಾರ್ಡ್‌ಗಳಲ್ಲಿ ಮತ್ತು ಜಾತ್ರೆಗೆ ಬಂದ ಲಕ್ಷಾಂತರ ಭಕ್ತರಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪಪಂ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ರವಿ ಅಂಗಡಿ ಹೇಳಿದರು.

    ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಾತ್ರಾ ಮಹೋತ್ಸವವು ಮಾ.7 ರಿಂದ ಪ್ರಾರಂಭವಾಗಿ ಮಾ.20ಕ್ಕೆ ಮುಕ್ತಾಯಗೊಳ್ಳಲಿದೆ. ಪಟ್ಟಣವನ್ನು ಪೌರ ಕಾರ್ಮಿಕರು ನಿತ್ಯ ಸ್ವಚ್ಛತೆಗೊಳಿಸುವಂತೆ ಸೂಚಿಸಲಾಗಿದೆ. ವಿದ್ಯುತ್ ದೀಪಗಳನ್ನು ಅಳಡಿಸಬೇಕು. ಜಾತ್ರೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳ ಜತೆ ಪಪಂ ಸದಸ್ಯರು ಕೂಡ ಕೈ ಜೋಡಿಸಬೇಕು. ತಮ್ಮ ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಅರ್ಜಿಯ ಮೂಲಕ ಸಲ್ಲಿದರೆ ಕ್ರಮಕೈಗೊಳ್ಳಲಾಗುವುದು ಎಂದರು.

    ರಾಜೀವ ಗಾಂಧಿ ಕುಡಿವ ನೀರಿನ ಯೋಜನೆಯಡಿಯ ಪಟ್ಟಣಕ್ಕೆ ಬರಬೇಕಾದ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪಪಂ ಸದಸ್ಯರಾದ ಮಂಜುನಾಥ ಗಡಾದ, ಹುಸೇನಸಾಬ ಸುಳೇಕಲ್, ಹುಲಗಪ್ಪ ವಾಲೇಕಾರ ಒತ್ತಾಯಿಸಿದರು.

    ಪಪಂ ಸದಸ್ಯರಾದ ರವಿ ಭಜಂತ್ರಿ, ಶರಣಪ್ಪ ಭತ್ತದ್, ತಿಮ್ಮಣ ನಾಯಕ, ಮಹ್ಮದ್ ಪಾಷಾ, ರವಿ ಸಜ್ಜನ್, ಪಪಂ ಮುಖ್ಯಾಧಿಕಾರಿ ತಿರುಮಲಾಂಬ, ಕಿರಿಯ ಇಂಜಿನಿಯರ್ ಶಿಲ್ಪಾ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts