More

    ಹುಲಿಹೈದರ್ ಗ್ರಾಮಕ್ಕೆ ಸತ್ಯಶೋಧನಾ ಸಮಿತಿ; ನೊಂದ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹ

    ಕನಕಗಿರಿ: ಹುಲಿಹೈದರ್ ಘಟನೆಯ ಸತ್ಯಾಸತ್ಯತೆ ಅರಿಯಲು ಪ್ರಗತಿಪರ ಚಿಂತಕರು, ಹೈಕೋರ್ಟ್ ವಕೀಲರು, ಹೋರಾಟಗಾರರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

    ಘಟನೆಯಲ್ಲಿ ನೊಂದ ಕುಟುಂಬದ ಮನೆಗಳಿಗೆ ತೆರಳಿದ ಸಮಿತಿ ಸದಸ್ಯರು ಸಾಂತ್ವನ ತಿಳಿಸಿ ಹೇಳಿಕೆ ಪಡೆದರು. ನೊಂದ ಕುಟುಂಬಕ್ಕೆ ಪರಿಹಾರ ಸಿಗಬೇಕು, ಉನ್ನತ ಮಟ್ಟದ ತನಿಖೆಯಾಗಬೇಕು. ಘಟನೆಯಿಂದಾಗಿ ಅಮಾಯಕರು ಸಹ ಜೈಲು ಸೇರಿದ್ದು, ಬಿಡುಗಡೆಗೊಳ್ಳಬೇಕು. ಘಟನೆಗೆ ಕಾರಣರಾದವರು, ಪಾಲ್ಗೊಂಡವರನ್ನು ಪತ್ತೆ ಹಚ್ಚಿ ಅಂಥವರಿಗೆ ಶಿಕ್ಷೆಗೊಳಪಡಿಸಬೇಕು. ಅಲ್ಲದೆ, ಗ್ರಾಮದಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಶಾಂತಿ ಸಭೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಬೇಕು. ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ.ಪರಿಹಾರ ಘೋಷಿಸಬೇಕು. ಚಿಕಿತ್ಸೆ ಪಡೆಯುತ್ತಿರುವ ಧರ್ಮಣ್ಣನಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಶೋಧನಾ ಸಮಿತಿಯು ಸರ್ಕಾರಕ್ಕೆ ಒತ್ತಾಯಿಸಿತು. ಅಲ್ಲದೆ, ಪ್ರಕರಣ ಕುರಿತಂತೆ ನಿಜಾಂಶವನ್ನು ಲಿಖಿತ ರೂಪದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ತಂಡದ ಉದ್ದೇಶವೆಂದು ಸಮಿತಿ ತಿಳಿಸಿತು.

    ಪಿಯುಸಿಎಲ್ ಸಂಘಟನೆಯ ಅಧ್ಯಕ್ಷ ಅರವಿಂದ ನಾರಾಯಣ, ಆಲ್ ಇಂಡಿಯಾ ಪೀಪಲ್ಸ್ ಫೋರಂ ಸಂಘಟನೆ ಸದಸ್ಯ ಮಣಿ, ಗಮನ ಮಹಿಳಾ ಸಂಘಟನೆಯ ಸದಸ್ಯ ಮನು, ಎಐಎಲ್‌ಎಜೆ ಸಂಘಟನೆಯ ಖಜಾಂಚಿ ಮಹ್ಮದ್ ಅಶಿಫ್, ಪಿಯುಸಿಎಲ್ ಜಿಲ್ಲಾಧ್ಯಕ್ಷ ಮಹಾಂತೇಶ ಕೊತಬಾಳ, ಪ್ರಗತಿಪರ ಚಿಂತಕರಾದ ಬಸವರಾಜ ಶೀಲವಂತರ, ಜೆ.ಭಾರದ್ವಾಜ್, ಆನಂದ ಭಂಡಾರಿ, ಕನಕಪ್ಪ ದೊಡ್ಡಮನಿ, ಪಾಮಣ್ಣ ಅರಳಿಗನೂರು, ಕೆಂಚಪ್ಪ ಹಿರೇಖೇಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts