More

    ಹುಲಿಹೈದರ್ ಗ್ರಾಪಂಗೆ ಕಾಂಪೌಂಡ್; ಕೊಪ್ಪಳ ಎಸ್ಪಿ, ಡಿಸಿ ಆದೇಶದ ಮೇರೆಗೆ ನಿರ್ಮಾಣ

    ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾಮ ಪಂಚಾಯಿತಿ ಕಟ್ಟಡ ಸುತ್ತ ಕಾಂಪೌಂಡ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

    ಗ್ರಾಪಂ ಮುಂದಿನ ಖಾಲಿ ಸ್ಥಳವನ್ನು ಯಾವುದೇ ವೃತ್ತ ನಿರ್ಮಾಣಕ್ಕೆ ನೀಡದಿರಲು ಜಿಲ್ಲಾಡಳಿತದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲು ಪಂಚಾಯಿತಿ ಕಟ್ಟಡದ ಮುಂದಿನ ಒಂದು ಭಾಗದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಒಂದು ಗುಂಪು ಮುಂದಾಗಿತ್ತು. ಅದಕ್ಕಾಗಿ ಗುಂಡಿಯೂ ಅಗೆಯಲಾಗಿತ್ತು. ಆದರೆ, ವಾಲ್ಮೀಕಿ ಜತೆಗೆ ಬುದ್ಧ, ಬಸವ, ಅಂಬೇಡ್ಕರ್‌ರ ವೃತ್ತವನ್ನು ಜಂಟಿಯಾಗಿ ನಿರ್ಮಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು. ಈ ಕುರಿತು ಆ.7ರಂದು ಗ್ರಾಮದಲ್ಲಿ ಶಾಂತಿ ಸಭೆ ನಡೆದಿತ್ತಾದರೂ ವಾಗ್ವಾದ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಜಿಲ್ಲಾ ಮೀಸಲು ಪಡೆಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿತ್ತು. ಅದಾದ ಬಳಿಕ ವಿನಾ ಕಾರಣ ಆ.11ರಂದು ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಇಬ್ಬರು ಬಲಿಯಾಗಿದ್ದರು. ಬಳಿಕ ವೃತ್ತಕ್ಕಾಗಿ ಗ್ರಾಪಂ ಮುಂದೆ ಅಗೆದಿದ್ದ ಗುಂಡಿ ಮುಚ್ಚಿಸಲಾಯಿತು. ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳುವಂತೆ ಗ್ರಾಪಂಗೆ ಎಸ್ಪಿ ಸೂಚಿಸಿದ್ದರು. ಅಲ್ಲದೆ, ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗಲೂ ಗ್ರಾಪಂ ಮುಂದೆ ಕಾಂಪೌಂಡ್ ನಿರ್ಮಾಣಕ್ಕೆ ಸೂಚಿಸಿದ್ದರು.

    ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಲಾಟೆಗಳಾಗುತ್ತಿದ್ದು, ಎಸ್ಪಿ ಕಾಂಪೌಂಡ್ ನಿರ್ಮಿಸಿಕೊಳ್ಳುವಂತೆ ಪತ್ರ ಬರೆದಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದಾಗ ಮೌಖಿಕವಾಗಿ ಸೂಚಿಸಿದ್ದರಿಂದ ರಕ್ಷಣಾ ಗೋಡೆ ನಿರ್ಮಿಸಲಾಗುತ್ತಿದೆ.
    | ಚಂದ್ರಶೇಖರ ಕಂದಕೂರು ತಾಪಂ ಇಒ, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts