More

    ಕನಕದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ

    ಕನಕಗಿರಿ: ಪಟ್ಟಣದ 5ನೇ ವಾರ್ಡ್‌ನ ನಿರ್ಲೂಟಿ ರಸ್ತೆಯಲ್ಲಿನ ಜೀರ್ಣೋದ್ಧಾರಗೊಂಡ ಕನಕದುರ್ಗಾದೇವಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು.


    ಭಕ್ತರು ಹಾಗೂ ಸಮಿತಿಯ ನೇತೃತ್ವದಲ್ಲಿ ಜೀರ್ಣೋದ್ಧಾರಗೊಂಡ ದೇವಸ್ಥಾನಕ್ಕೆ ಹೊಸಪೇಟೆಯಲ್ಲಿ ದೇವಿ ಮೂರ್ತಿಯನ್ನು ತಯಾರಿಸಿ ಮಾ.28ರಂದು ಪಟ್ಟಣಕ್ಕೆ ತಂದಿದ್ದು, ಮೂರ್ತಿಯ ಪುರ ಪ್ರವೇಶಿಸುತ್ತಿದ್ದಂತೆ ರಾಜಬೀದಿಯಲ್ಲಿ ಕುಂಭ, ಕಳಶದೊಂದಿಗೆ ಮೆರವಣಿಗೆ ಮಾಡಲಾಗಿತ್ತು. ಅದಾದ ಬಳಿಕ ಗುರುವಾರದಂದು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ಶುಕ್ರವಾರದಂದು ಬಸಾಪಟ್ಟಣದ ಮಾರ್ಕಂಡಯ್ಯಸ್ವಾಮಿ ಪೌರೋಹಿತ್ಯದಲ್ಲಿ ಹೋಮ-ಹವನಗಳೊಂದಿಗೆ ದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.


    ನಿವಾಸಿಗಳು ಹಾಗೂ ಭಕ್ತರ ಸಹಕಾರದಿಂದ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ಸುವರ್ಣಗಿರಿಗೆ ಇದೇ ದೇವಿಯು ಗ್ರಾಮದೇವತೆಯಾಗಿದ್ದಳು ಎನ್ನುವ ಪ್ರತೀತಿಯಿದ್ದು, ಗ್ರಾಮವು ಒಳ ಹೋದ ಬಳಿಕ ಗೋರಾಳಕೇರಿ ದುರ್ಗಾದೇವಿಯು ಗ್ರಾಮದೇವತೆಯಾಗಿದ್ದಾಳೆ ಎಂದು ಹಿರಿಕರು ಹೇಳುತ್ತಾರೆ ಎಂದು ಪುರುಷೋತ್ತಮರೆಡ್ಡಿ ಮಾದಿನಾಳ ತಿಳಿಸಿದರು.


    ದಶರಥರೆಡ್ಡಿ ಮಾದಿನಾಳ, ಶರಣಪ್ಪ ಭತ್ತದ್, ಮಲ್ಲಿಕಾರ್ಜುನಗೌಡ ಪೊಪಾ, ಜನಾರ್ದನರೆಡ್ಡಿ ಮಾದಿನಾಳ, ಮಹಾಬಳೇಶ ಸಜ್ಜನ್, ಶೇಖರಗೌಡ ಪೊಪಾ, ಕಳಕಪ್ಪ ಹಾದಿಮನಿ, ಷಣ್ಮುಖ ಕಮಲಾಪುರ, ಶರಣಪ್ಪ ಕಲಿಕೇರಿ, ರಮೇಶ ಸಿರಿವಾರ, ಗ್ಯಾನಪ್ಪ ಗಾಣದಾಳ, ಲೋಕಪುತ್ರಪ್ಪ ದ್ಯಾವಣ್ಣವರ್, ಕಂಠಿರಂಗಪ್ಪ ನಾಯಕ, ಪಶುಪತಿ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts