More

    ಕನಕದಾಸರ ಕೀರ್ತನೆಗಳಿಂದ ಸಮಾಜ ಸುಧಾರಣೆ

    ರಾಮದುರ್ಗ: ಸಮಾಜದ ಸುಧಾರಣೆಯಲ್ಲಿ ಕನಕದಾಸರ ಶ್ರೇಷ್ಠ ಕೀರ್ತನೆಗಳು ಇಂದಿಗೂ ಶ್ರೇಷ್ಠವಾದವು. ಅವುಗಳನ್ನು ಜೀವನದಲ್ಲಿ ಅಳವಡಿಕೆ ಮಾಡಿಕೊಂಡಲ್ಲಿ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

    ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕುರುಬ ಸಮುದಾಯದ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಹಾಗೂ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಜನತೆ ಸರ್ವ ಸಮುದಾಯದವರೊಂದಿಗೆ ಸಾಮರಸ್ಯದ ಜೀವನ ನಡೆಸಬೇಕು. ಅಂದಾಗ ಮಾತ್ರ ಇಂತಹ ಮಹಾನ್ ವ್ಯಕ್ತಿಗಳ ಜಯಂತ್ಯುತ್ಸವ ಆಚರಣೆಗೆ ಅರ್ಥ ಬರಲು ಸಾಧ್ಯ ಎಂದರು.

    ಹುಲಜಂತಿ ಪಟ್ಟದ ಮಾಳಿಂಗರಾಯ ಮಹಾರಾಜರು, ಲಖನಾಯ್ಕನಕೊಪ್ಪ ಪೂರ್ಣಾನಂದ ಮಠದ ಕೃಷ್ಣಾನಂದ ಸ್ವಾಮೀಜಿ, ಹಳೇತೊರಗಲ್‌ದ ಕರಿಸಿದ್ದೇಶ್ವರ ಸ್ವಾಮೀಜಿ, ಸಾಲಹಳ್ಳಿಯ ಮಾಳಿಂಗರಾಯ ಮಠದ ಪೂಜಾರಿ ಸಿದ್ದಪ್ಪ ಸ್ವಾಮೀಜಿ, ಶಿವಾನಂದ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಕುರುಬ ಸಮುದಾಯದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ, ಮಾಜಿ ಅಧ್ಯಕ್ಷ ವಿಠ್ಠಲ ಜಟಗನ್ನವರ, ತಾಲೂಕು ಉಪಾಧ್ಯಕ್ಷ ಬಿ.ಬಿ.ಹಾಗನೂರ, ತಾಪಂ ಇಒ ಪ್ರವೀಣಕುಮಾರ ಸಾಲಿ, ಸಮುದಾಯದ ಮುಖಂಡರಾದ ಅಶೋಕ ಮೆಟಗುಡ್ಡ, ರೇಣಪ್ಪ ಸೋಮಗೊಂಡ, ಶೇಖರ ಸಿದ್ಲಿಂಗಪ್ಪನವರ, ಫಕೀರಪ್ಪ ಕೊಂಗವಾಡ, ಎಂ.ಎಸ್. ಸೋಮಗೊಂಡ, ಬಿ.ಎಂ.ಜಂತ್ಲಿ, ಎಚ್.ಬಿ. ಕಿತ್ತೂರ, ಪುರಸಭೆ ಸದಸ್ಯರಾದ ರಾಜೇಶ್ವರಿ ಮೆಟಗುಡ್ಡ, ಲಕ್ಷ್ಮೀ ಕಡಕೋಳ, ಪದ್ಮಾವತಿ ಸಿದ್ಲಿಂಗಪ್ಪನವರ, ಮಾಜಿ ತಾಪಂ ಅಧ್ಯಕ್ಷ ಸುರೇಖಾ ಸೋಮಗೊಂಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts