More

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯ; ಕನಕದಾಸರ ಬೋಧನೆ, ತತ್ವ್ವಗಳು ನಿತ್ಯ ಸತ್ಯ

    ಧಾರವಾಡ: ಭಾರತದ ಮಹನೀಯರು, ಸಂತ ಶ್ರೇಷ್ಠರನ್ನು ಜಾತಿ ಆಧಾರದ ಮೇಲೆ ಅಳೆಯದೆ ಅವರ ಗುಣದ ಆಧಾರದ ಮೇಲೆ ಗೌರವಿಸಬೇಕು. ದಾಸ ಶ್ರೇಷ್ಠ ಕನಕದಾಸರು ತಮ್ಮ ಜೀವನ ಕ್ರಮ, ತತ್ವ ಬೋಧನೆ, ಸಾಹಿತ್ಯ ರಚನೆ, ಕೀರ್ತನಗಳ ಮೂಲಕ ಮಹಾದಾರ್ಶನಿಕರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
    ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕನಕದಾಸರು ಸಮಾಜದಲ್ಲಿ ಸಮಾನತೆಯ ಹರಿಕಾರರಾದರು. ನಿತ್ಯ ಕಾಯಕದ ಸಂದೇಶ ಸಾರಿದರು. ನುಡಿದಂತೆ ನಡೆದು ಗುರು, ದೇವರಿಗೆ ಅಷ್ಟೆ ಅಲ್ಲದೆ, ಸಮಾಜಕ್ಕೆ ದಾರಿದೀಪವಾದರು. ಸಾಮಾಜಿಕ ಬದಲಾವಣೆಗೆ ಅವರ ಸಾಹಿತ್ಯ ಪ್ರೇರಣೆ ಆಗಿದೆ. ಅವರ ಕಿರ್ತನಗಳಲ್ಲಿನ ಸಂದೇಶಗಳು ನಿತ್ಯ ಸತ್ಯವಾಗಿವೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಶ್ರೀ ಕನಕದಾಸರ ಜೀವನ, ತತ್ವಾದರ್ಶಗಳು ಇಂದಿನ ಸಮಾಜಕ್ಕೆ ಸ್ಫೂರ್ತಿದಾಯಕವಾಗಿವೆ. ಸಮಾಜದಲ್ಲಿ ಪರಸ್ಪರ ಸಾಮರಸ್ಯ, ಐಕ್ಯತೆ, ಸಹಜೀವನಕ್ಕೆ ಅವರ ಸಂದೇಶಗಳು ದಾರಿದೀಪ ಎಂದರು.
    ಕಾನೂನು ತಜ್ಞ ಹಾಗೂ ಚಿಂತಕ ಡಾ. ಲೋಹಿತ್ ನಾಯ್ಕರ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಜೇಶ್ವರಿ ಸಾಲಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಮನಸೂರು ರೇವಣಸಿದ್ಧೇಶ್ವರ ಮಹಾಮಠದ ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಹಿರಿಯರಾದ ಯಲ್ಲಮ್ಮ ನಾಯ್ಕರ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಜ್ಯೋತಿ ಪಾಟೀಲ, ಶಂಕರ ಶಳಕೆ, ವಿಷ್ಣು ಕೊರ್ಲಹಳ್ಳಿ, ಇತರರಿದ್ದರು.
    ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡ ನಿರೂಪಿಸಿದರು. ದೇವರಾಜ ಕಂಬಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts