More

    ಮೌಢ್ಯಗಳ ವಿರುದ್ಧ ಕನಕದಾಸರು ಹೋರಾಡಿದರು; ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿಕೆ

    ಹಾವೇರಿ: ಕನಕದಾಸರು ಸಮಾಜದಲ್ಲಿರುವ ಮೌಢ್ಯಗಳನ್ನು ಕಿತ್ತೊಗೆಯಲು ಇಡೀ ಜೀವನವನ್ನು ಸಮಾಜಕ್ಕಾಗಿ ಸಮರ್ಪಿಸಿದರು. ಸಾಹಿತ್ಯ ರಚನೆಯ ಮೂಲಕ ಸಮಾಜದಲ್ಲಿನ ಮೇಲು ಕೀಳು ಭಾವನೆ ಹಾಗೂ ಜಾತಿ ವ್ಯವಸ್ಥೆಯನ್ನು ಬೇರುಸಮೇತ ಕಿತ್ತೊಗೆಯಲು ಮತ್ತು ಸಮಾನತೆಗಾಗಿ ತಮ್ಮ ಜೀವನವನ್ನು ಭಗವಂತನಲ್ಲಿ ಲೀನಗೊಳಿಸಿದ ದೈವ ಮಾನವ ದಾಸ ಶ್ರೇಷ್ಠ ಕನಕದಾಸರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು. ಇಲ್ಲಿನ ಕಾಗಿನೆಲೆ ರಸ್ತೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 536ನೇ ಕನಕದಾಸರ ಜಯಂತಿ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚಣೆಯ ಮೂಲಕ ಉದ್ಘಾಟಿಸಿ, ನಂತರ ಮಾತನಾಡಿದರು.
    ಕನಕದಾಸರ ಮೊದಲಿನ ಹೆಸರು ತಿಮ್ಮಪ್ಪ, ತಂದೆಯ ಹೆಸರು ಬೀರಪ್ಪ, ತಾಯಿ ಬಚ್ಚಮ್ಮ. ಅವರ ವಿಚಾರಧಾರೆಗಳು ಇಂದಿಗೂ ಅತ್ಯವಶ್ಯಕವಾಗಿವೆ. ಅವರ ಆಚಾರ, ವಿಚಾರಗಳು, ಆದರ್ಶಗಳನ್ನು ನಮ್ಮೆಲ್ಲರ ಬಾಳಿನಲ್ಲಿ ಅಳವಡಿಸಿಕೊಂಡು ನಡೆದಾಗ ಅವರಿಗೆ ನಾವುಗಳು ಶ್ರೇಷ್ಠ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ ಮಾತನಾಡಿ, ಭಕ್ತಿಯೆಂಬ ಶಕ್ತಿಯ ಮೂಲಕ ಭಗವಂತನ ದಿಕ್ಕನ್ನೇ ಬದಲಿಸಿದ ದಾಸ ಶ್ರೇಷ್ಠ ಕನಕದಾಸರ ಜೀವನ ನಮ್ಮೆಲ್ಲರಿಗೂ ದಾರಿದೀಪ ಎಂದರು.
    ಸಮಾರಂಭದಲ್ಲಿ ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಚನ್ನಮ್ಮ ಬ್ಯಾಡಗಿ, ಬಸವಣ್ಣೆವ್ವ ಕನವಳ್ಳಿ, ಶಿವಯೋಗಿ ಹುಲಿಕಂತಿಮಠ, ನಂಜುಡೇಶ ಕಳ್ಳೇರ, ಗುಡ್ಡಪ್ಪ ಬರಡಿ, ಕಿರಣ ಕೋಣನವರ, ನಾಗರಾಜ ಹುರಳಿಕುಪ್ಪಿ, ಮಧುಕೇಶ್ವರ ಹಂದ್ರಾಳ, ಹುನ್ನಪ್ಪ ಮಾಳಗಿ, ಅಡವಯ್ಯ ಯಲುಗಿಮಠ, ರಾಘವೇಂದ್ರ ಕಬಾಡೆ, ನಾಗರಾಜ ಹಾರಗೋಲ, ಶಿವಯೋಗಿ ಕೊಳ್ಳಿ, ಶಿವಾನಂದಯ್ಯ ಗುಗ್ಗರಿ, ಮಂಜುನಾಥ ತಾಂಡೂರ, ಪ್ರಕಾಶ ಪತ್ತಾರ, ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts