More

    ಸಮಸ್ಯೆ ಪರಿಹರಿಸಲು ಅಹವಾಲು ಸಲ್ಲಿಸಲು ಹೇಳಿದ ತಹಸೀಲ್ದಾರ್ ಜಗದೀಶ್

    ಕಾನಹೊಸಹಳ್ಳಿ: ಕಂದಾಯ ಸೇರಿದಂತೆ ಇತರ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳನ್ನು ಪರಿಹಾರಿಸಲು ಅಹವಾಲು ಸಲ್ಲಿಸಿ ಎಂದು ತಹಸೀಲ್ದಾರ್ ಜಗದೀಶ್ ತಿಳಿಸಿದರು. ಕಾನಹೊಸಹಳ್ಳಿ ಸಮೀಪದ ಹುರುಳಿಹಾಳ್ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ಕಂದಾಯ ಇಲಾಖೆ ಸಂಬಂಧಿತ ಪಹಣಿ, ಪೋಡಿ, ದಾನ, ಸರ್ವೇ ದಾಖಲೆ, ಪಡಿತರ ಕಾರ್ಡ್, ಮಾಸಾಶನ, ಮನಸ್ವಿನಿ, ರಾಷ್ಟ್ರೀಯ ಭದ್ರತಾಯೋಜನೆ, ಅಂಗವಿಕಲ, ವಿಧವಾ, ಸಂಧ್ಯಾಸುರಕ್ಷಾ ಮಾಸಾಶನಕ್ಕೆ ಸಂಬಂಧಿಸಿ ಸಮಸ್ಯೆಗಳಿದ್ದರೆ ಕೂಡಲೇ ಪರಿಹಾರಿಸಲಾಗುವುದು ಎಂದರು.

    ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ 500 ಜನರಿಗೆ ಮಾಸಾಶನ ಮಂಜೂರು ಮಾಡಿಲಾಗಿದೆ. ಸದ್ಯ ಕಾರ್ಯಕ್ರಮದಲ್ಲಿ ಸಂಕೇತಿಕವಾಗಿ 15 ಜನರಿಗೆ ಮಾಸಾಶನ ವೇತನದ ಆದೇಶ ನೀಡಲಾಗಿದೆ ಎಂದರು. ತಹಸೀಲ್ದಾರ್ ಮತ್ತು ತಾಪಂ ಇಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ದಲಿತರ ವಸತಿ ಪ್ರದೇಶಕ್ಕೆ ಭೇಟಿ ನೀಡಿ ನಂತರ ಕುಟುಂಬದ ಸಮಸ್ಯೆಗಳ ಕುರಿತು ಖುದ್ದು ಮಾಹಿತಿ ಪಡೆದರು.

    ಕಾರ್ಯಕ್ರಮದಲ್ಲಿ ರೈತರಿಂದ 104 ಅರ್ಜಿ ಬಂದಿದ್ದು, ಮಾಸಾಶನ, ಪಿಂಚಣಿ, ಅಂಗವಿಕಲ ಮತ್ತು ವಿಧವಾ ವೇತನಕ್ಕೆಂದು ಕೆಲವರು ಸಲ್ಲಿಸಿದ ಅರ್ಜಿಗಳ ಪೈಕಿ 15ಜನರಿಗೆ ಸ್ಥಳದಲ್ಲಿ ಆದೇಶ ಪತ್ರ ವಿತರಿಸಿದರು. ಕಂದಾಯ ಇಲಾಖೆಯ 54, ಪಂಚಾಯತ್ ರಾಜ್ 29, ಕೃಷಿ 2, ಆಹಾರ 3, ಪಶು 1, ಜೆಸ್ಕಾಂ 11, ಅಬಕಾರಿ-1, ಸಮಾಜಕಲ್ಯಾಣ 1, ಸಿಡಿಪಿಒ 1, ಪಿಡಿಬ್ಲ್ಯುಡಿ 1, ಸೇರಿ 104 ಅರ್ಜಿ ಸಾರ್ವಜನಿಕರಿಂದ ಅರ್ಜಿ ಸ್ವೀಕೃತವಾಗಿವೆ.

    ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷೆ ಚನ್ನಬಸಮ್ಮ, ಜಿಪಂ ಮಾಜಿ ಸದಸ್ಯ ಎಚ್.ರೇವಣ್ಣ, ತಾಪಂ ಇಒ ಜಿ.ಎಂ.ಬಸಣ್ಣ, ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ, ತಾಲೂಕು ಡಿಎಚ್‌ಒ ಡಾ.ಷಣ್ಮುಖನಾಯ್ಕ, ಪಿಡಿಬ್ಲ್ಯುಡಿ ಇಲಾಖೆಯ ಕೆ.ನಾಗನಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಾಗನಗೌಡ ಪಾಟೇಲ್, ಗುಡೇಕೋಟೆ ಆರ್‌ಎಫ್‌ಒ ರೇಣುಕಾ, ಗುಡೇಕೋಟೆ ಕಂದಾಯ ನಿರೀಕ್ಷಕ ಹರೀಶ್, ಗ್ರಾಪಂ ಪಿಡಿಒ ಕೆಂಚಪ್ಪ, ಕಾರ್ಯದರ್ಶಿ ಹನುಮಂತಪ್ಪ ಮತ್ತು ಹುರುಳಿಹಾಳ್ ಗ್ರಾಪಂ ವ್ಯಾಪ್ತಿಯ 9ಹಳ್ಳಿ ಜನರು ಭಾಗವಹಿಸಿದ್ದರು.

    ಬೇಸಿಗೆ ಆರಂಭವಾಗಿದ್ದು, ನೀರಿನ ಸಮಸ್ಯೆ ಬಗ್ಗೆ ಸದಾ ಕಾಳಜಿ ವಹಿಸಬೇಕು ಅಲ್ಲದೆ, ಬೇಸಿಗೆ ಇರುವುದರಿಂದ ಕೂಲಿಗಾಗಿ ಮಹಾನಗರ, ಕಾಫಿ ಸೀಮೆಗೆ ಹಳ್ಳಿಗರು ವಲಸೆ ಹೋಗುವುದು ಬೇಡ. ಬದಲಾಗಿ ನರೇಗಾ ಯೋಜನೆಯನ್ವಯ ಕೆಲಸ ಮಾಡಿ ಜೀವನ ಕಟ್ಟಿಕೊಳ್ಳಿ, ಅಗತ್ಯ ಕೆಲಸವನ್ನು ಗ್ರಾಪಂ ನೀಡಲಿದೆ.
    | ಜಿ.ಎಂ.ಬಸಣ್ಣ, ತಾಪಂ ಇಒ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts