More

    ಸಮಸಮಾಜ ನಿರ್ಮಣಕ್ಕೆ ಸಂಘಟನೆ ಅಗತ್ಯ

    ಕಾನಹೊಸಹಳ್ಳಿ: ತಳ ಸಮುದಾಯದ ಜನರು ಸಮಾಜದಲ್ಲಿ ಸಮಾನತೆ ಪಡೆಯುವುದರ ಜತೆಗೆ ಸಂಘಟನಾತ್ಮಕವಾಗಿ ಒಗ್ಗೂಡಬೇಕು ಅ ಮೂಲಕ ಸಮಸಮಾಜ ಕಾಣಲು ಸಾಧ್ಯ ಎಂದು ತಾಪಂ ಮಾಜಿ ಉಪಾದ್ಯಕ್ಷೆ ಎಂ.ವಿಶಾಲಕ್ಷಿರಾಜಣ್ಣ ಹೇಳಿದರು.

    ಇದನ್ನೂ ಓದಿ: ರೈತ ಸಂಘದಿಂದ ಕೂನಬೇವು ಗ್ರಾಮ ಘಟಕ ಉದ್ಘಾಟನೆ

    ಗುಡೇಕೋಟೆ ಸಮೀಪದ ಗಡಿಗ್ರಾಮ ಗಡ್ಡದಬೋರಯ್ಯನಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕ ಉದ್ಘಾಟನೆಯಲ್ಲಿ ಮಾತನಾಡಿದರು.

    ದಸಂಸ ಕರ್ನಾಟಕದಲ್ಲಿ ಸಂವಿಧಾನ ಬದ್ಧ ಆಶಯಗಳನ್ನು ತನ್ನ ಅಜೆಂಡಾವನ್ನಾಗಿಸಿಕೊಂಡಿರುವ ಏಕೈಕ ಸಂಘಟನೆಯಾಗಿದೆ. ಎಲ್ಲ ಆದರ್ಶಗಳನ್ನು ಆಚರಣೆಗೆ ತರಬೇಕೆನ್ನುವುದು ಈ ಸಂಘಟನೆಯ ಚಳವಳಿಯ ಆಶಯವಾಗಿದೆ. ದಲಿತ ಸಮುದಾಯದ ಯುವಕರು ಮೊದಲು ಶಿಕ್ಷಣವಂತರಾದಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಗ್ರಾಮದಲ್ಲಿ ಎಲ್ಲರೂ ಒಂದೇ ಕುಟುಂಬದವರಂತೆ ಸ್ನೇಹ ಸೌಹಾರ್ದತೆಯಿಂದ ಬದುಕಿ ಎಂದರು.

    ಪದಾಧಿಕಾರಿಗಳ ಅಯ್ಕೆ: ಗ್ರಾಮ ಘಟಕ ಸಂಚಾಲಕರಾಗಿ ಎನ್.ಎಸ್.ಗಂಗಾಧರ, ಸಂಘಟನಾ ಸಂಚಾಲಕರಾಗಿ ಬಿ.ಮಲ್ಲಿಕಾರ್ಜುನ್, ಪಾಪಣ್ಣ, ಶೇಖರಪ್ಪ,ಯಶವಂತ್, ತಿಪ್ಪೇಸ್ವಾಮಿ, ಖಜಾಂಚಿ ಅಂಜಿನೇಯ್ಯ, ಸದಸ್ಯರಾದ ಉಮೇಶ್, ಸೋಮಶೇಖರ್, ಶ್ರೀಧರ್,ತಿಪ್ಪೇಸ್ವಾಮಿ, ನಾಗರಾಜ್, ತಿಪ್ಪೇಸ್ವಾಮಿ, ರಾಮು, ಲಕ್ಷ್ಮಣ್, ರಾಮಚಂದ್ರಪ್ಪ, ಹೊನ್ನೂರಪ್ಪ, ಮೈಲಾರಿ, ಕೃಷ್ಣಮೂರ್ತಿ, ಮಂಜುನಾಥ್, ಮಲ್ಲಿಕಾರ್ಜುನ, ನಾಗರಾಜ್‌ರನ್ನು ನೇಮಕ ಮಾಡಲಾಯಿತು.

    ವಿಜಯನಗರ ಜಿಲ್ಲಾ ದಸಂಸ ಸಂಚಾಲಕ ಗೆದ್ದಲಗಟ್ಟೆ ಹನುಮೇಶ್, ಚಿರತಗುಂಡು ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಕರಿಬಸಪ್ಪ, ಡಿ.ಎಂ.ಈಶ್ವರಪ್ಪ, ಬಿಟಿಗುದ್ದಿ ದುರುಗೇಶ್, ತಾಲೂಕು ಸಂಚಾಲಕ ಎಳನೀರು ಗಂಗಣ್ಣ, ವಕೀಲರಾದ ಮಾರಮ್ಮನಹಳ್ಳಿ ನಾಗರಾಜ, ಗುಡೇಕೋಟೆ ನಾಗರಾಜ್, ಸಿಎಸ್ ಪುರ ಮಂಜು, ಬಸಪ್ಪ, ತಾಲೂಕು ಸಂಘಟನಾ ಸಂಚಾಲಕ ಬಣವಿಕಲ್ಲು ಚೌಡೇಶ್, ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಅಧ್ಯಕ್ಷ ಮನೋಹರ್ ಹೆಗಡೆ, ಗುಡೇಕೋಟೆ ಪೋಲೀಸ್ ಠಾಣೆಯ ಎಎಸ್‌ಐ ನಾಗರಾಜ್ ಆಚಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts