More

  ರೈತನ ಮೇಲೆ ಕರಡಿ ದಾಳಿ

  ಕಾನಹೊಸಹಳ್ಳಿ: ಬೆಳೆಗೆ ನೀರು ಹಾಯಿಸಲೆಂದು ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಮಂಗಳವಾರ ರಾತ್ರಿ ಸಮೀಪದ ಕರಡಿಹಳ್ಳಿಯಲ್ಲಿ ನಡೆದಿದೆ.

  ಪಾಪಣ್ಣ ಗಾಯಳು ರೈತ. ಈತ ರಾತ್ರಿ ವೇಳೆ ತ್ರಿಪೇಸ್ ವಿದ್ಯುತ್ ನೀಡುವುದರಿಂದ ಬೆಳೆಗೆ ನೀರು ಹಾಯಿಸಲು ಕುಟುಂಬ ಸದಸ್ಯನೊಂದಿಗೆ ಜಮೀನಿಗೆ ತೆರಳಿದ್ದಾಗ ಕರಡಿ ದಾಳಿ ನಡೆಸಿದೆ. ಎದೆ ಮತ್ತು ಹೊಟ್ಟೆ ಭಾಗದಲ್ಲಿ ತೀವ್ರಗಾಯವಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಗುಡೇಕೋಟೆ ಕರಡಿಧಾಮ ಆರ್‌ಎಫ್‌ಒ ರೇಣುಕಾ ಮಾತನಾಡಿ, ಬೇಸಿಗೆ ಕಾಲವಾಗಿರುವ ಕಾರಣ ಕರಡಿಗಳಿಗೆ ಅರಣ್ಯದಲ್ಲಿ ಆಹಾರ ಕೊರತೆ ಸಹಜವಾಗಿ ಕಾಡುತ್ತದೆ. ಹೀಗಾಗಿ ಅವು ಕಾಡಿನಿಂದ ಜಮೀನಿಗೆ ಬರುತ್ತವೆ. ಈ ಸಮಯದಲ್ಲಿ ರೈತರ ಮೇಲೆ ದಾಳಿ ಜರುಗುತ್ತದೆ. ಗಾಯಗೊಂಡ ರೈತನಿಗೆ ಚಿಕಿತ್ಸೆ ವೆಚ್ಚ ಇಲಾಖೆ ಭರಿಸಲಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts