More

    ಮಹಿಳೆಯರಿಗೆ ಸಮಾನ ಶಿಕ್ಷಣ ಒದಗಿಸಿ- ಬಲಿಜ ಮಹಿಳಾ ಸಂಘದ ಅಧ್ಯಕ್ಷೆ ಶಾರದಾ ಲೋಕೇಶ್ ಸಲಹೆ

    ಕಂಪ್ಲಿ: ಸ್ತ್ರೀಯರಿಗೆ ಶಿಕ್ಷಣದೊಂದಿಗೆ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರ ಮಹತ್ವದ್ದಾಗಿದೆ ಎಂದು ಬಲಿಜ ಮಹಿಳಾ ಸಂಘದ ಅಧ್ಯಕ್ಷೆ ಶಾರದಾ ಲೋಕೇಶ್ ಹೇಳಿದರು.

    ಮಾರುತಿನಗರದ ಯೋಗಿ ನಾರೇಯಣ ಯತೀಂದ್ರ ಭವನದಲ್ಲಿ ಮಂಗಳವಾರ ಬಲಿಜ ಮಹಿಳಾ ಸಂಘ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆಯವರ 192ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದರು. ಮಹಿಳೆಯರಿಗೆ ಶಿಕ್ಷಣ ಕೊಡುವುದು ಧರ್ಮದ್ರೋಹ ಎನ್ನುವ ತಪ್ಪು ತಿಳುವಳಿಕೆಯ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಧೃತಿಗೆಡದೆ ಹಿಂದುಳಿದ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಅಕ್ಷರ ಕ್ರಾಂತಿ ಮಾಡಿದರು. ಅವರ ಸಂಕಲ್ಪದಿಂದಾಗಿ ಮಹಿಳೆಯರು ಶಿಕ್ಷಣವಂತರಾಗಲು ಸಾಧ್ಯವಾಗಿದೆ. ಗಂಡು ಹೆಣ್ಣು ಎಂದು ತಾರತಮ್ಯ ಎಸಗದೆ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವಲ್ಲಿ ಪೋಷಕರು ಜಾಗೃತಿ ತೋರಬೇಕು ಎಂದರು.

    ವಿಜಯನಗರ ಆಂಗ್ಲಮಾಧ್ಯಮ ಪ್ರೌಢಶಾಲೆ ಶಿಕ್ಷಕಿ ಶಂಕ್ರಮ್ಮ ಎನ್.ಗಿರಿಸಾಗರ್, ಚೇತನ ವಿದ್ಯಾನಿಕೇತನ ಶಾಲೆಯ ಶಿಕ್ಷಕಿ ಎಂ.ಆರ್.ಸಾವಿತ್ರಿಯವರನ್ನು ಗೌರವಿಸಲಾಯಿತು. ಬಲಿಜ ಮಹಿಳಾ ಸಂಘದ ಪದಾಧಿಕಾರಿಗಳಾದ ಕೆ.ವಿದ್ಯಾ ಶಿವಕುಮಾರ್, ಪ್ರಮುಖರಾದ ಭಾಗ್ಯಲಕ್ಷ್ಮೀ. ಕೆ.ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts