More

    ಹಳ್ಳಿ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ

    ಕಂಪ್ಲಿ: ಗ್ರಾಮೀಣ ಕ್ರೀಡಾಪಟುಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಹೇಳಿದರು.

    ಷಾ.ಮಿಯಾಚಂದ್ ಸರ್ಕಾರಿ ಪಿಯುಸಿ ಕಾಲೇಜಿನ ಆವರಣದಲ್ಲಿ ಬಳ್ಳಾರಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಂಪ್ಲಿ ತಾಪಂ, ಶಿಕ್ಷಣ ಇಲಾಖೆ ಮಂಗಳವಾರ ಹಮ್ಮಿಕೊಂಡ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗ್ರಾಮೀಣ ಕ್ರೀಡಾಕೂಟ ಹಳ್ಳಿಯ ಪ್ರತಿಭೆಗಳಿಗೆ ವರದಾನವಾಗಿದೆ. ಗ್ರಾಮೀಣ ಕ್ರೀಡಾಪಟುಗಳಿಗೂ ಸೂಕ್ತ ಅವಕಾಶ ದೊರಕಿಸಿಕೊಡುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಸಾಗಿದೆ. ಇಂತಹ ಅವಕಾಶವನ್ನು ಕ್ರೀಡಾ ಪ್ರತಿಭೆಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಕ್ರೀಡಾಕೂಟದಲ್ಲಿ ವಿವಿಧ ವಿಭಾಗದ ಹತ್ತು ಜನ ಕುಸ್ತಿಪಟುಗಳು, 9 ಕಬಡ್ಡಿ ತಂಡಗಳು, 8 ಖೋಖೋ ತಂಡಗಳು ಪಾಲ್ಗೊಂಡಿವೆ. ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ರಾಮಸಾಗರ ರಾಮಕೃಷ್ಣ ವಿಜೇತರಾದರು.

    ತಾಪಂ ಯೋಜನಾಧಿಕಾರಿ ರಾಕೇಶ್, ವ್ಯವಸ್ಥಾಪಕಿ ಅಪರಂಜಿ, ಪಿಡಿಒಗಳಾದ ಸಾವಿತ್ರಿ ಕೆ.ಗೌರೋಜಿ, ಬಸಪ್ಪ, ತಾರು ನಾಯ್ಕ, ಕೆ.ಎಚ್.ಶಶಿಕಾಂತ, ನಾಗರಾಜ, ಮುಖ್ಯಶಿಕ್ಷಕ ಟಿ.ಎಂ.ಬಸವರಾಜ, ದೈಹಿಕ ಶಿಕ್ಷಣ ಶಿಕ್ಷಕರಾದ ಬೀರಲಿಂಗೇಶ್ವರ, ರಮೇಶ್ ಎನ್.ಶಿವಪುರ, ಸಂತೋಷ, ಅಶ್ವಿನಿ, ಅಬ್ದುಲ್ ಅಜೀಜ್, ಗುರುಬಸವರಾಜ, ಆರ್.ವೆಂಕಟರಮಣ, ಮೌಲಾನ್‌ಬೀ, ಮಂಗಳಗೌರಮ್ಮ, ಶಂಬುಲಿಂಗ, ಯು.ಅಶೋಕ್, ಲಕ್ಷ್ಮೀ ಕಾಂತ ಬಣಗಾರ, ಎನ್.ರಮೇಶ ಸೇರಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts