More

    ಭ್ರಷ್ಟಾಚಾರ ಕಡಿವಾಣಕ್ಕೆ ಎಎಪಿಯೇ ಪರಿಹಾರ

    ಕಂಪ್ಲಿ: ರಾಜ್ಯದಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಆಮ್ ಆದ್ಮಿ ಪಾರ್ಟಿಯೇ ಅಂತಿಮ ಪರಿಹಾರ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಎಎಪಿ ಕಾರ್ಯದರ್ಶಿ ಎಚ್.ಪ್ರಹ್ಲಾದನಾಯಕ ಹೇಳಿದರು.

    ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಎಎಪಿ ಜಾಗೃತಿ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಮತದಾರರು ಪೊರಕೆ ಬಳಸಿ ಭ್ರಷ್ಟರನ್ನು ಓಡಿಸುವ ಮೂಲಕ ಕರ್ನಾಟಕವನ್ನು ಉಳಿಸಬೇಕಿದೆ. ರಾಜ್ಯದ ಅಭಿವೃದ್ಧಿ ಮತ್ತು ಸರ್ವ ಸಮಸ್ಯೆಗಳ ಪರಿಹಾರಕ್ಕೆ ಪೊರಕೆಯೇ ಪರಿಹಾರವಾಗಿದೆ. ಎಲ್ಲ ಪಕ್ಷಗಳಿಗೂ ಅಧಿಕಾರ ಕೊಟ್ಟ ಮತದಾರರು ರಾಜ್ಯದಲ್ಲಿ ಎಎಪಿಗೂ ಅಧಿಕಾರ ಕೊಡುವಲ್ಲಿ ಮುಂದಾಗಬೇಕು ಎಂದರು.

    ಎಎಪಿ ಜಿಲ್ಲಾ ಸಂಪರ್ಕ ಅಧಿಕಾರಿ ಮಹ್ಮದ್ ರಫಿಕ್ ಮಾತನಾಡಿ, ಕೆಲವೇ ದಿನಗಳಲ್ಲಿ ಎಎಪಿ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳಲಿದ್ದು, ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಪ್ರಕಟಗೊಳಿಸಲಾಗುತ್ತದೆ. ಎಎಪಿ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲಮನ್ನಾಗೊಳ್ಳಲಿದೆ. ನಿರುದ್ಯೋಗ ಭತ್ಯೆ, ಉಚಿತ ವಿದ್ಯುತ್, ಕುಡಿವ ನೀರು ಪೂರೈಕೆ ಹಾಗೂ ಮೂಲಸೌಕರ್ಯಗಳನ್ನು ಉಚಿತವಾಗಿ ವಿತರಿಸುವ ಮೂಲಕ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ತಗ್ಗಿಸಲಾಗುವುದು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾದರಿ ಆಡಳಿತಕ್ಕಾಗಿ ರಾಜ್ಯದ ಮತದಾರರು ಎಎಪಿ ಬೆಂಬಲಿಸಬೇಕು ಎಂದರು. ಜಾಗೃತಿ ಅಭಿಯಾನ ಮುಖ್ಯಬೀದಿಗಳ ಮೂಲಕ ಸಾಗಿ ಸರ್ಕಾರಿ ಆಸ್ಪತ್ರೆ ಎದುರಿನ ಡಾ.ಪುನೀತ್ ರಾಜಕುಮಾರ್ ವೃತ್ತದಲ್ಲಿ ಸಮಾವೇಶಗೊಂಡಿತು. ಎಎಪಿ ಪ್ರಮುಖರಾದ ಮೋದಿಪಲ್ಲೆ ರಾಮಮೂರ್ತಿ, ಕಾರ್ಯಕರ್ತರಾದ ಕಂಪ್ಲಿ ಪ್ರವೀಣ್, ಕೆ.ಗುರುರಾಜ, ಪರಶುರಾಮ, ವೀರೇಶ್, ಉಮಾದೇವಿ, ಲಕ್ಷ್ಮೀದೇವಿ, ಕವಿತಾ, ವಿಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts