More

    ಕೌಶಲ ತರಬೇತಿಯಿಂದ ಸ್ವಯಂ ಉದ್ಯೋಗ

    ಕಂಪ್ಲಿ: ಮಹಿಳೆಯರು ಧೈರ್ಯ ಮಾಡಿದರೆ ಎಲ್ಲ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಇಲ್ಲಿನ ಪವಿತ್ರಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ವಿ.ಪವಿತ್ರಾ ಶಿವನಗೌಡ ಹೇಳಿದರು.

    ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಮಾನ್ಯತೆಪಡೆದ ಇಲ್ಲಿನ ಸಿದ್ಧ ಉಡುಪುಗಳ ಹೊಲಿಗೆ ತರಬೇತಿ ಕೇಂದ್ರದ ಆವರಣದಲ್ಲಿ ಗುರುವಾರ ಅಡ್ವಾನ್ಸ್ ಸೀವ್ಹಿಂಗ್ ಮಷೀನ್ ಆಪರೇಟರ್ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ, ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

    ಮಹಿಳೆಯರು ಹೊಲಿಗೆ ಸೇರಿ ಕೌಶಲಾಧಾರಿತ ತರಬೇತಿ ಪಡೆದು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕಿದೆ. ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ. ಟ್ರಸ್ಟ್‌ನಿಂದ 660 ಮಹಿಳೆಯರಿಗೆ 38 ದಿನಗಳ ಫ್ಯಾಷನ್ ಡಿಸೈನ್ ಉಚಿತ ಹೊಲಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಿದ್ದು, ಬಹುತೇಕರು ಸ್ವಉದ್ಯೋಗನಿರತರಾಗಿದ್ದಾರೆ ಎಂದರು.

    ಹಾಸನದ ಹಿಮಂತ್‌ಸಿಂಗ್ ಕಾ ಲೆನಿನ್ಸ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಜಗದೀಶ್ ಮಾತನಾಡಿದರು. ಕರ್ತವ್ಯದಲ್ಲಿ ಸಮಯ ಪಾಲನೆ ಮಾಡಿದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ತರಬೇತಿ ಶಿಕ್ಷಕಿಯರಾದ ಸ್ವಾತಿ, ರಜನಿ, ಶೈಲಜಾ, ಚಂದ್ರಕಲಾ, ಪದ್ಮಾ, ಪೂಜಾ, ಲೇಪಾಕ್ಷಿ, ಸುಧಾ, ಮೇರಿ, ಸಾಧಿಕಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts