More

    ಕ್ರಿಕೆಟ್ ಕೇವಲ ಪುರುಷರ ಆಟವಲ್ಲ

    ಕಂಪ್ಲಿ: ಗ್ರಾಮೀಣ ಮಹಿಳೆಯರು ಕ್ರಿಕೆಟ್ ಆಟದಿಂದ ಹಿಂದುಳಿಯಬಾರದು ಎಂದು ತಾಪಂ ಇಒ ಕೆ.ಎಸ್. ಮಲ್ಲನಗೌಡ ಹೇಳಿದರು.

    ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ತಾಪಂ ವಿಶ್ವ ಮಹಿಳಾ ದಿನದ ಪ್ರಯುಕ್ತ ಆಯೋಜಿಸಿದ್ದ ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಬುಧವಾರ ಮಾತನಾಡಿದರು. ಕ್ರಿಕೆಟ್ ಕೇವಲ ಪುರುಷರ ಆಟವಲ್ಲ. ಸ್ತ್ರೀಯರೂ ಆಡುವ ಕ್ರೀಡೆಯಾಗಿದೆ. ಮಹಿಳೆಯರು ನಿತ್ಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರೀಡಾಕೌಶಲ ಗಳಿಕೊಳ್ಳಬೇಕೆಂದು ಸಲಹೆ ನೀಡಿದರು.

    ಗ್ರಾಮೀಣ ಮಹಿಳೆ, ಯುವತಿಯರನ್ನೊಳಗೊಂಡ ನಾಯಕಿ ನಿಖಿತಾ ಅವರ ಎನ್‌ಆರ್‌ಎಲ್‌ಎಂ ತಂಡ ಮತ್ತು ನಾಯಕಿ ನಾಜೀರಾ ಅವರ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ತಂಡದ ಮಧ್ಯೆ 5 ಒವರ್‌ಗಳ ಆಟ ಆಡಿಸಲಾಗಿದ್ದು, ಟಾಸ್ ಗೆದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಂಡ 6 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದರೆ, ಎನ್‌ಆರ್‌ಎಲ್‌ಎಂ ತಂಡ 4ವಿಕೆಟ್ ಕಳೆದುಕೊಂಡು 38ರನ್‌ಗಳಿಸಿ ವಿಜಯ ಸಾಧಿಸಿತು.

    ತಾಪಂ ಎಡಿಪಿಆರ್ ಅಪರಂಜಿ, ಉಪ ಪ್ರಾಚಾರ್ಯ ಟಿ.ಎಂ.ಬಸವರಾಜ್, ತಾಲೂಕು ದೈಹಿಕ ಪರಿವೀಕ್ಷಕ ಬಸವರಾಜ ಜತ್ತಿ, ಮಹಿಳಾ ಮೇಲ್ವಿಚಾರಕಿಯರಾದ ಅಕ್ಷತಾ ಮಸ್ಕಿ, ಎಚ್.ರೇಣುಕಾ, ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ಅಶೋಕ್, ಬೀರಲಿಂಗೇಶ್ವರ, ವೆಂಕಟರಮಣ, ಲಕ್ಷ್ಮೀಕಾಂತ ಬಣಕಾರ, ನಾಗಭೂಷಣ ಹಾಗೂ ತಾಪಂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts