More

    ಕಂಪ್ಲಿಯಲ್ಲಿ ರಾತ್ರಿ ಸುರಿದ ಮಳೆಗೆ ನಾರಿಹಳ್ಳದ ಸೇತುವೆಗಳು ಮುಳುಗಡೆ; ಸಂಪರ್ಕ ಕಡಿತ, ಜನರ ಪರದಾಟ

    ಕಂಪ್ಲಿ: ಪಟ್ಟಣ ಸೇರಿ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ (65.4 ಮಿಮೀ)ಮಳೆಗೆ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ನಾರಿಹಳ್ಳ ತುಂಬಿ ಹರಿದ ಪರಿಣಾಮ ಅದಕ್ಕೆ ನಿರ್ಮಿಸಿದ ಸೇತುವೆಗಳು ಮುಳುಗಡೆಯಾಗಿ ಸಂಚಾರಕ್ಕೆ ವ್ಯತ್ಯಯವಾಯಿತು.

    ನಾರಿಹಳ್ಳ ತುಂಬಿ ಹರಿದಿದ್ದರಿಂದ ಕಂಪ್ಲಿ-ಚಿಕ್ಕಜಾಯಿಗನೂರು, ಚಿಕ್ಕಜಾಯಿಗನೂರು-ಬಳ್ಳಾಪುರ, ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪ ಹಳ್ಳದ ಸೇತುವೆ, ಇಟಗಿ-ಮಾರೆಮ್ಮ ಕ್ಯಾಂಪ್, ಸಣಾಪುರ-ಮಾರೆಮ್ಮ ಕ್ಯಾಂಪ್ ಮಧ್ಯದ ಮಾರೆಮ್ಮನಹಳ್ಳ ಕಿರು ಸೇತುವೆಗಳು ಮುಳುಗಡೆ ಆಗಿದ್ದರಿಂದ ಜನರ ಪರದಾಡುವಂತಾಯಿತು. ಶ್ರೀರಾಮರಂಗಾಪುರ ಗ್ರಾಮದಲ್ಲಿ ನಾರಿಹಳ್ಳಕ್ಕೆ ನೂತನ ಸೇತುವೆ ನಿರ್ಮಿಸುತ್ತಿದ್ದು ತಾತ್ಕಾಲಿಕವಾಗಿ ಬೈಪಾಸ್ ರಸ್ತೆ ಕಲ್ಪಿಸಲಾಗಿತ್ತು. ಆದರೆ, ಮಳೆ, ಹಳ್ಳದ ನೀರು ನುಗ್ಗಿ ಬೈಪಾಸ್ ರಸ್ತೆ ಸಹ ಮುಳುಗಿತು. ಅಲ್ಲದೆ ಹೊಲ ಗದ್ದೆಗಳಿಗೆ ನೀರು ನುಗ್ಗಿ ಭತ್ತ, ಮೆಕ್ಕೆಜೋಳ ಸೇರಿ ಇತರ ಬೆಳೆಗಳು ಜಲಾವೃತವಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts