More

    ನಿರ್ಭಯವಾಗಿ ದೂರು ನೀಡಿ- ಸಾರ್ವಜನಿಕರಿಗೆ ಲೋಕಾಯುಕ್ತ ಪಿಎಸ್‌ಐ ಮಹಮ್ಮದ್ ರಫಿಕ್ ಸಲಹೆ

    ಕಂಪ್ಲಿ: ಪಾರದರ್ಶಕ, ತ್ವರಿತ ಮತ್ತು ಸರಳ ಆಡಳಿತ ಮೂಲಕ ಜನ ಸೇವೆ ಒದಗಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಮುಂದಾಗಬೇಕು ಎಂದು ಬಳ್ಳಾರಿಯ ಲೋಕಾಯುಕ್ತ ಪಿಎಸ್‌ಐ ಮಹಮ್ಮದ್ ರಫಿಕ್ ಹೇಳಿದರು.

    ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರು ನಿರ್ಭಯವಾಗಿ ಲೋಕಾಯುಕ್ತರಿಗೆ ದೂರು ಕೊಡಬೇಕು. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲೇ ಆಡಳಿತ ನಡೆಸಬೇಕು. ನಿಗದಿತ ಶುಲ್ಕ ಹೊರತಾಗಿ ಹೆಚ್ಚಿನ ಹಣ ಪಡೆಯಬಾರದು. ಸೇವೆ ಪಡೆದುಕೊಳ್ಳುವ ನೆಪದಲ್ಲಿ ದುರುದ್ದೇಶ ಸಾಧಿಸುವವರ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಡುವಲ್ಲಿ ಅಧಿಕಾರಿಗಳು ಹಿಂಜರಿಯಬಾರದು. ಲೋಕಾಯುಕ್ತರ ಸಾರ್ವಜನಿಕ ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಬೇಸಿಗೆ ಆಗಮಿಸುತ್ತಿದೆ. ಸಮರ್ಪಕ ಕುಡಿವನೀರು ಪೂರೈಕೆ, ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ, ಆರೋಗ್ಯ ಮತ್ತು ತಾಲೂಕು ಅಡಳಿತ ಸಮನ್ವಯ ಸಾಧಿಸಬೇಕು ಎಂದರು.
    ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮಾತನಾಡಿ, ಹೌಸಿಂಗ್ ಬೋರ್ಡ್ ಕಾಲನಿ ಸೇರಿ 21ನೇವಾರ್ಡ್‌ಗಳಲ್ಲಿ 30 ಲಕ್ಷ ರೂ.ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಲೋಕಾಯುಕ್ತರ ಗಮನಕ್ಕೆ ತಂದರು. ಸಭೆಯಲ್ಲಿ ಕಂದಾಯಕ್ಕೆ ಸಂಬಂಧಿಸಿದ 4ಅರ್ಜಿ, ಎಡಿಎಲ್‌ಆರ್ 1ಸೇರಿ 5ಅರ್ಜಿಗಳನ್ನು ಸಾರ್ವಜನಿಕರಿಂದ ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದರು.
    16ಕೆಎಂಪಿ02

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts