More

    ಕಲ್ಯಾಣ ಕರ್ನಾಟಕ ಉತ್ಸವ ಕಡ್ಡಾಯವಾಗಿ ಆಚರಿಸಿ

    ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್ ಸೂಚನೆ

    ಕಂಪ್ಲಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಎಲ್ಲ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಎಂದು ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್ ಹೇಳಿದರು.

    ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಎಲ್ಲ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 8ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ತಹಸಿಲ್ ಕಚೇರಿ ಆವರಣಕ್ಕೆ ಬರಬೇಕು. ಬೆಳಗ್ಗೆ 9 ಗಂಟೆಗೆ ತಹಸೀಲ್ದಾರ್ ಗೌಸಿಯಾ ಬೇಗಮ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

    ಪುರಸಭೆ ಸಿಒ ಕೆ.ದುರುಗಣ್ಣ, ಶಿರಸ್ತೆದಾರ್ ಎಸ್.ಡಿ.ರಮೇಶ್, ವಿಎಒ ಮಾಲತೇಶ ದೇಶಪಾಂಡೆ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಕರೇಕಲ್ ಮನೋಹರ ಇದ್ದರು.

    ವಿಶ್ವಕರ್ಮ ಸಂಘದ ತಾಲೂಕು ಕಾರ್ಯದರ್ಶಿ ಡಿ.ಮೌನೇಶ್ ಮಾತನಾಡಿ, ವಿಶ್ವಕರ್ಮ ಪೂಜಾಮಹೋತ್ಸವಕ್ಕೆ ಆನೆಗೊಂದಿ ಸಂಸ್ಥಾನದ ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಶಾಸಕ ಜೆ.ಎನ್.ಗಣೇಶ್ ಅವರನ್ನು ಆಹ್ವಾನಿಸಬೇಕು ಎಂದರು.

    ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್, ಡಿ.ಕಾಳಾಚಾರಿ, ಕೃಷ್ಣ, ರಾಘವೇಂದ್ರ, ವೆಂಕಣ್ಣಾಚಾರಿ, ನಾರಾಯಣಾಚಾರಿ ವೀರಭದ್ರಾಚಾರಿ, ಎ.ಯಂಕಪ್ಪ ಆಚಾರಿ, ಎಂ.ಮಂಜುನಾಥಾಚಾರಿ, ಅಳ್ಳಳ್ಳಿ ಮೌನೇಶ್, ಮೆಟ್ರಿ ಷಣ್ಮುಖ, ಗಣೇಶ್, ಡಾ.ವೇದಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts