More

    ಗುಡಾರ ಗುಡಿಸಲು ಮುಕ್ತ ಕರ್ನಾಟಕಕ್ಕೆ ಸಮೀಕ್ಷೆ: ವಿಮುಕ್ತ ಬುಡಕಟ್ಟುಗಳ ಅಭಿವೃದ್ಧಿ ಮಂಡಳಿ ಸದಸ್ಯ ಕೆ.ಭಾಸ್ಕರ್‌ದಾಸ್ ಹೇಳಿಕೆ

    ಕಂಪ್ಲಿ: ಬುಡಕಟ್ಟು ಸಮುದಾಯದವರಿಗೆ ಮೂಲಸೌಕರ್ಯ ಒದಗಿಸಿ, ತಾಲೂಕಿಗೊಂದು ಮಾದರಿ ಕಾಲನಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ನವದೆಹಲಿಯ ಸಾಮಾಜಿಕ ನ್ಯಾಯ ಹಕ್ಕುಗಳ ಸಬಲೀಕರಣ ಸಚಿವಾಲಯದ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಅಭಿವೃದ್ಧಿ ಮಂಡಳಿ ಸದಸ್ಯ ಕೆ.ಭಾಸ್ಕರ್‌ದಾಸ್ ಹೇಳಿದರು.

    ಇಲ್ಲಿನ ಎಂ.ಡಿ.ಕ್ಯಾಂಪ್‌ಗೆ ಸೋಮವಾರ ಭೇಟಿ ನೀಡಿದ ವೇಳೆ ಅಲೆಮಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಮುದಾಯದವರಿಗೆ ಮನೆ, ಶಿಕ್ಷಣ, ಆರೋಗ್ಯ, ಸ್ವಉದ್ಯೋಗ ಸೇರಿ ಇತರ ಸೌಲಭ್ಯ ಒದಗಿಸಿ ಸಶಕ್ತರನ್ನಾಗಿಸಬೇಕಿದೆ. ಗುಡಾರ ಗುಡಿಸಲು ಮುಕ್ತ ಕರ್ನಾಟಕವನ್ನಾಗಿಸಬೇಕಿದ್ದು, ಕೇಂದ್ರ ಸರ್ಕಾರ ಸಮೀಕ್ಷೆ ನಡೆಸುತ್ತಿದೆ ಎಂದು ತಿಳಿಸಿದರು.

    ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿರಾಮು ಮಾತನಾಡಿ, ಕಂಪ್ಲಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಒಬಿಸಿಗೆ ಒಳಪಟ್ಟ ಸುಡುಗಾಡು ಸಿದ್ಧರ 85, ಹಕ್ಕಿಪಿಕ್ಕಿ 135, ಸಿಂಧೋಳ್ಳು 80, ಬುಡ್ಗ ಜಂಗಮರ 18, ಹೆಳವ 11, ಗೋಂಧಳಿ 65, ಚನ್ನದಾಸರ 60, ಬಯಲು ಪತ್ತಾರ 22 ಕುಟುಂಬಗಳಿದ್ದು, ಕೇವಲ ಸರ್ವೇಗೆ ಸೀಮಿತಗೊಳಿಸದೆ, ಸೂಕ್ತ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ, ಸಿಂಧೋಳ್ಳು ಸಮುದಾಯ ರಾಜ್ಯಾಧ್ಯಕ್ಷ ರಾವುಲ್ ನಾಗಪ್ಪ, ಪ್ರಮುಖರಾದ ಪಾಂಡುರಂಗ, ಭೀಮ, ನಾಗರಾಜ, ಆರ್.ಶಿವು, ಕಿರಣ್, ಈರಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts