More

    ಅಕ್ರಮ ವಿರುದ್ಧ ಧ್ವನಿ ಎತ್ತಿದವರಿಗೆ ನೋಟಿಸ್ – ಸರ್ವಾಧಿಕಾರಿ ಧೋರಣೆ ಎಂದು ಕಿಡಿಕಾರಿದ ಶಾಸಕ ಜೆ.ಎನ್. ಗಣೇಶ್

    ಕಂಪ್ಲಿ: ಅಕ್ರಮ ಬಯಲು ಮಾಡಿದವರಿಗೆ ನೋಟಿಸ್ ನೀಡುವುದು ಸರ್ವಾಧಿಕಾರಿ ಧೋರಣೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು. ತಾಲೂಕಿನ ಬೆಳಗೋಡ್‌ಹಾಳ್ ಗ್ರಾಮದಲ್ಲಿ ಮಂಗಳವಾರ ಕೆಪಿಸಿಎಲ್(ಬಿಟಿಪಿಎಸ್) ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ 73.40 ಲಕ್ಷ ರೂ.ಗಳಲ್ಲಿ ಬೆಳಗೋಡ್-ಕಂಪ್ಲಿ ರಸ್ತೆ ಅಭಿವೃದ್ಧಿ, ಬಸವೇಶ್ವರ ಕ್ಯಾಂಪಿನಲ್ಲಿ ಜೆ.ಜೆ.ಎಂ.ಯೋಜನೆಯಡಿ 12 ಲಕ್ಷ ರೂ. ವೆಚ್ಚದಲ್ಲಿ ಕುಡಿವ ನೀರಿನ ನಳ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಅಕ್ರಮ ಪಿಎಸ್‌ಐ ನೇಮಕಾತಿ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಖರ್ಗೆಗೆ ನೋಟಿಸ್ ನೀಡಿದ್ದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಪ್ರಿಕಾಂಕ ಖರ್ಗೆಯವರ ಬೆನ್ನಿಗಿದೆ ಎಂದರು.

    ಬೆಳಗೋಡ್‌ಹಾಳ್‌ನಲ್ಲಿ ಕೆಪಿಸಿಎಲ್ ಇಇ ಸೌಮ್ಯಾ, ಎಇಇ ನಿಜಾಮುದ್ದೀನ್, ಗ್ರಾಪಂ ಸದಸ್ಯರಾದ ಚಂದ್ರಶೇಖರಗೌಡ, ದುರುಗಪ್ಪ, ಪ್ರಮುಖರಾದ ಜಿ. ಶರಣಗೌಡ, ಅಯ್ಯಪ್ಪ ಹೂಗಾರ್, ಓಂಕಾರಗೌಡ, ಎಂ. ಮೂರ್ತಿಸ್ವಾಮಿ, ಸಿ.ರಾಮಪ್ಪ, ಮೌಲಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts