More

    ಆಸ್ಪತ್ರೆಯ ವಾತಾವರಣ ಸ್ವಚ್ಛವಾಗಿರಲಿ- ಲೋಕಾಯುಕ್ತ ಪಿಎಸ್‌ಐ ಮಹಮ್ಮದ್ ರಫಿಕ್ ಸೂಚನೆ

    ಕಂಪ್ಲಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಬಳ್ಳಾರಿ ಲೋಕಾಯುಕ್ತ ಪಿಎಸ್‌ಐ ಮಹಮ್ಮದ್ ರಫಿಕ್ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

    ಆಸ್ಪತ್ರೆಯಲ್ಲೆಲ್ಲ ಸುತ್ತಾಡಿ ರೋಗಿಗಳೊಂದಿಗೆ ಸಮಾಲೋಚಿಸಿ, ಸಿಬ್ಬಂದಿಯನ್ನು ವಿಚಾರಿಸಿದರು. ಸಿಬ್ಬಂದಿ ಹಾಜರಿ ಪುಸ್ತಕ ಸೇರಿ ದಾಖಲೆಗಳನ್ನು ಪರಿಶೀಲಿಸಿದರು. ಸಿಬ್ಬಂದಿಗೆ ಎಚ್ಚರಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು.

    ಡೆಂಟಲ್ ಯೂನಿಟ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಎಮರ್ಜೆನ್ಸಿ ವಾರ್ಡ್‌ನ್ನು ಉತ್ತಮವಾಗಿಟ್ಟುಕೊಳ್ಳಬೇಕಿದೆ. ಆಸ್ಪತ್ರೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕಿದೆ. ಆಸ್ಪತ್ರೆ ಸ್ವಚ್ಛವಾಗಿದ್ದರೂ ಇನ್ನಷ್ಟು ಶುದ್ಧ ವಾತಾವರಣ ರೂಪಿಸಬೇಕು. ಆಸ್ಪತ್ರೆಯ ಒಳಭಾಗದಲ್ಲಿ ಅಗತ್ಯವಿರುವ ಕಡೆ ಸಿಸಿ ಕ್ಯಾಮರಾ ಅಳವಡಿಸಬೇಕು. ದಾಖಲೆಗಳನ್ನು ಸಮರ್ಪಕವಾಗಿಡಬೇಕು. ಹೆರಿಗೆಗೆ ಹಣ ಪಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಟಿಎಚ್‌ಒ ಡಾ.ರಾಧಿಕಾಗೆ ಸೂಚಿಸಿದರು.

    ತಾಲೂಕು ವೈದ್ಯಾಧಿಕಾರಿ ಡಾ.ರಾಧಿಕಾ ಮಾತನಾಡಿ, ಸಿಬ್ಬಂದಿ ಕೊರತೆಯಿದೆ. ಲಭ್ಯವಿರುವ ಸಿಬ್ಬಂದಿ ಬಳಸಿಕೊಂಡು ಗರಿಷ್ಠ ಸೇವೆ ಸಲ್ಲಿಸಲು ಸೂಕ್ತ ಕ್ರಮ ಕೈಗೊಂಡಿದ್ದೇವೆ. ಆಸ್ಪತ್ರೆಯ ವಾತಾವರಣವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಗಮನಹರಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts