More

    ಇತಿಹಾಸದಲ್ಲಿ ವಿಶೇಷ ಮಾನ್ಯತೆ ಗಳಿಸಿದೆ ಕಲ್ಮಠ

    ಕಂಪ್ಲಿ: ಕಂಪ್ಲಿಯ ಇತಿಹಾಸದಲ್ಲಿ ಕಲ್ಮಠದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ದಾಸೋಹ ಮಹತ್ವವು ವಿಶೇಷ ಮಾನ್ಯತೆ ಗಳಿಸಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. ಇಲ್ಲಿನ ಕಲ್ಮಠದ ಆವರಣದಲ್ಲಿ ಮಂಗಳವಾರ ಸಂಜೆ ಜರುಗಿದ ಹಂಪೆಯ ಶ್ರೀ ವಿರೂಪಾಕ್ಷೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹ ಮಂಗಲೋತ್ಸವ ಸಮಾರಂಭದಲ್ಲಿ, ಶ್ರೀ ಕ್ಷೇತ್ರ ಕಲ್ಮಠ(ವಿರಕ್ತಮಠ)ಟ್ರಸ್ಟ್ ಶಿಲಾಫಲಕ ಅನಾವರಣಗೊಳಿಸಿ ಮಾತನಾಡಿದರು.

    ಕಲ್ಮಠವು ಶೈಕ್ಷಣಿಕ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದೆ. ಕಲ್ಮಠದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು. ಸಾನ್ನಿಧ್ಯವಹಿಸಿದ್ದ ಮುಳಗುಂದಿ ಕೇರೂರಿನ ಮುರುಘಮಠದ ಮಲ್ಲಿಕಾರ್ಜುನ ಸ್ವಾಮಿ, ಕಂಪ್ಲಿಯ ಕಲ್ಮಠವು ಐತಿಹಾಸಿಕ ಮಹತ್ವದೊಂದಿಗೆ ದಾಸೋಹ ಪರಂಪರೆಯ ಶ್ರೀಮಂತಿಕೆಯನ್ನೊಂದಿದೆ. ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಆಸ್ಥಾನದಲ್ಲಿ ಕಂಪ್ಲಿ ಕಲ್ಮಠದ ಪ್ರಭುಸ್ವಾಮಿಗಳ ಪ್ರಖಂಡ ಪ್ರವಚನಕ್ಕೆ ಮಾರುಹೋಗಿ ನಲವತ್ತೆರೆಡು ಅಂಕಣದ ಶಿಲಾಮಂಠಪವನ್ನು ನಿರ್ಮಿಸಿಕೊಟ್ಟಿದ್ದು ಕಲ್ಮಠದ ಕ್ರಿಯಾಶಕ್ತಿಯ ಹಿರಿಮೆಯಾಗಿದೆ. ರಾಜದಂಪತಿಗಳ ಸದಿಚ್ಚೆಯಂತೆ ಹಂಪೆಯ ವಿರೂಪಾಕ್ಷೇಶ್ವರ ಜಾತ್ರೆಯಲ್ಲಿ ದಾಸೋಹ ನಡೆಸುತ್ತ ಬಂದಿರುವುದು ಸ್ತುತ್ಯಾರ್ಹವಾಗಿದೆ ಎಂದರು.

    ಅರಳಿಹಳ್ಳಿಯ ಹಿರೇಮಠದ ಶ್ರೀರೇವಣಸಿದ್ದಯ್ಯನವರಿಂದ ಅಕ್ಕಮಹಾದೇವಿ ಕುರಿತು ಉಪನ್ಯಾಸ, ಗಂಗಾವತಿಯ ಶ್ರೀರಾಮು ಇವರ ಸಂಗೀತ ಕಾರ್ಯಕ್ರಮಕ್ಕೆ ಅರಳಿಹಳ್ಳಿಯ ಬಸವರಾಜ ಹಿರೇಮಠದ ಹದ್ಲಿ ಇವರು ತಬಲಸಾತ್ ನೀಡಿದರು. ಕಲ್ಮಠದ ಅಭಿನವ ಪ್ರಭುಸ್ವಾಮಿ, ಬಳ್ಳಾರಿ ಕಲ್ಯಾಣಚೌಕಿಮಠದ ಕಲ್ಯಾಣಸ್ವಾಮಿ, ಗುತ್ತಲ ಅಗಡಿಯ ಕಲ್ಮಠದ ಗುರುಸಿದ್ದಯ್ಯಸ್ವಾಮಿ, ಮುಷ್ಟೂರಿನ ಋಷಿ ಮಾಧವಾನಂದಸ್ವಾಮಿ, ಶ್ರೀಕ್ಷೇತ್ರ ಕಲ್ಮಠ(ವಿರಕ್ತಮಠ)ಟ್ರಸ್ಟ್ ಕಾರ್ಯಾಧ್ಯಕ್ಷ ಎಚ್.ಶಿವಶಂಕರಗೌಡ, ಪದಾಧಿಕಾರಿಗಳಾದ ಜಿ.ಲಿಂಗನಗೌಡ, ಗುತ್ತಿಗೆನೂರು ಶಿವಜಾತ, ಕೊಟ್ರೇಶಗೌಡ, ಪಿ.ವೆಂಕನಗೌಡ, ಆರ್.ಚಂದ್ರಗೌಡ, ಜಿ.ಶಿವಮೂರ್ತೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts