More

    ಹಿಂದಿ ದಿವಸ ಆಚರಣೆ ಕೈಬಿಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಮನವಿ

    ಕಂಪ್ಲಿ: ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಹಿಂದಿ ದಿವಸ ಆಚರಣೆಯನ್ನು ಉಭಯ ಸರ್ಕಾರಗಳು ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಒತ್ತಾಯಿಸಿದರು.

    ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇಧದಲ್ಲಿರುವ ಎಲ್ಲ 22ಭಾಷೆಗಳಿಗೂ ಆಡಳಿತ ಭಾಷಾ ಸ್ಥಾನಮಾನ ನೀಡಬೇಕು. ಉಳಿದ ಭಾಷೆಗಳನ್ನು ಕಡೆಗಣಿಸಿ ಕೇವಲ ‘ಹಿಂದಿ ಭಾಷಾ ದಿವಸ’ ಆಚರಿಸುವ ಮೂಲಕ ಭಾರತದ ಐಕ್ಯತೆಯನ್ನು ಒಡೆಯುವ ಹುನ್ನಾರ ಅಡಗಿದೆ. ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು.

    ಈ ಹೇರಿಕೆಯಿಂದಾಗಿ ಶಿಕ್ಷಣ, ಉದ್ಯೋಗ ಮತ್ತಿತರ ಕ್ಷೇತ್ರಗಳಲ್ಲಿ ಹಿಂದಿ ಭಾಷಿಕರು ಇತರ ಭಾಷಿಕರಿಗಿಂತ ಹೆಚ್ಚಿನ ಆದ್ಯತೆ ಹೊಂದುವಂತಾಗಿದೆ. ಕೇಂದ್ರ ಸರ್ಕಾರದ ಅಸಮಾನತೆಯ ಭಾಷಾ ನೀತಿಯಿಂದ ಭಾಷಾ ತಾರತಮ್ಯ ತಾರಕಕ್ಕೇರುತ್ತಿದೆ. ಹಿಂದಿ ಮತ್ತು ಇಂಗ್ಲೀಷ್‌ಗೆ ನೀಡಿದ ಮಾನ್ಯತೆಯನ್ನು ಭಾರತದ ಎಲ್ಲ ಭಾಷೆಗಳಿಗೂ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts