More

    ಮೀನುಗಾರರ ಪ್ರಗತಿಗಾಗಿ ಸರ್ಕಾರಕ್ಕೆ 5.67 ಕೋಟಿ ರೂ. ಪ್ರಸ್ತಾವನೆ

    ಕಂಪ್ಲಿ: ತಾಲೂಕಿನ ಮೀನುಗಾರರ ಅಭಿವೃದ್ಧಿಗೆ 5.67 ಕೋಟಿ ರೂ.ಗಳಲ್ಲಿ ವಿವಿಧ ಯೋಜನೆ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಳ್ಳಾರಿಯ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಎನ್.ಬಸವನಗೌಡ ತಿಳಿಸಿದರು.

    ಇದನ್ನೂ ಓದಿರಿ: ತುಂಗಭದ್ರಾ ನದಿಯಲ್ಲಿ 3 ಲಕ್ಷ ಗೆಂಡೆಮೀನು ಮರಿಗಳ ಬಿತ್ತನೆ

    ಸೋಮಪ್ಪ ಕೆರೆಯಲ್ಲಿ ಮೀನು ಸಾಕಣೆಗೆ ಗುತ್ತಿಗೆ

    ಪಟ್ಟಣದ ಐತಿಹಾಸಿಕ ಸೋಮಪ್ಪ ಕೆರೆಗೆ ಕಟ್ಲ, ರವು, ಕಾಮನ್ ಕರ್ಪು ಜಾತಿಯ 50 ಸಾವಿರ ಮೀನು ಮರಿ ಮಂಗಳವಾರ ಬಿತ್ತನೆಗೊಳಿಸಿ ಮಾತನಾಡಿದರು.

    ಕೋಟೆಯ ಮೀನುಗಾರರ ಸಹಕಾರ ಸಂಘಕ್ಕೆ ಸೋಮಪ್ಪ ಕೆರೆಯನ್ನು ಮೀನು ಸಾಕಣೆಗೆ ಗುತ್ತಿಗೆ ನೀಡಲಾಗಿದೆ. ಜಿಲ್ಲಾ ಗಣಿಬಾದಿತ ನಿಧಿಯಲ್ಲಿ ಸಹಕಾರ ಸಂಘದ ಸದಸ್ಯರಿಗೆ ಲೈಫ್ ಜಾಕೆಟ್, ಐಸ್‌ಕ್ರೇಟ್ ಬಾಕ್ಸ್, ತಕ್ಕಡಿ, ಬಲೆ ಸೇರಿ 10 ಸಾವಿರ ರೂ.ಕಿಟ್ ವಿತರಿಸಲಾಗುವುದು ಎಂದರು.

    ತಾಲೂಕಿನ 1000 ಮೀನುಗಾರರಿಗೆ ಎರಡು ದಿನಗಳ ಮೀನು ಕೃಷಿ ತರಬೇತಿ ನೀಡಲಾಗುವುದು. ಮೀನುಕೃಷಿ ಅಧ್ಯಯನಕ್ಕಾಗಿ 100 ಮೀನುಗಾರರಿಗೆ ಮೂರು ದಿನಗಳ ಅಂತರ್ ಜಿಲ್ಲಾ, ಐದು ದಿನಗಳ ಅಂತರ ರಾಜ್ಯ ಪ್ರವಾಸ ಆಯೋಜಿಸಲಾಗುವುದು.

    ಮೀನುಮರಿ ಖರೀದಿಗೆ 20 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಮತ್ಸಾೃಶ್ರಯ ಯೋಜನೆಯಡಿ 20 ಫಲಾನುಭವಿಗಳಿಗೆ ವಸತಿ ನಿರ್ಮಿಸಲಾಗುವುದು ಎಂದು ಹೇಳಿದರು.

    ಮೀನು ಮಾರಾಟ ಮಳಿಗೆ ನಿರ್ಮಾಣ

    ಎಮ್ಮಿಗನೂರು ಭಾಗದ ಕೆರೆ ಮೀನುಗಳಿಗೆ ಸಮೃದ್ಧ ಆಕ್ಸಿಜನ್ ಪೂರೈಸಲು ಮೀನು ಸಾಕಣೆದಾರರಿಗೆ 300 ಏರೇಟರ್ಸ್‌ ಒದಗಿಸಲಾಗುವುದು. ಕಂಪ್ಲಿಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ, 2ರಿಂದ 3ಟನ್ ಮೀನು ಮಾರಾಟ ಮಾಡುವ 10 ಮಾರಾಟಗಾರರಿಗೆ ವಾಹನ ಸೌಲಭ್ಯ,

    25 ಲಕ್ಷ ರೂ.ಗಳಲ್ಲಿ ಮೀನು ತ್ಯಾಜ್ಯ ವಿಲೇವಾರಿ ಘಟಕ, ಚಿಲ್ಲರೆ ಮೀನು ಮಾರಾಟ ಮಳಿಗೆ ನಿರ್ಮಾಣಕ್ಕೆ 5 ಫಲಾನುಭವಿಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ, 50 ಲಕ್ಷ ರೂ.ಗಳಲ್ಲಿ ಮೀನುಗಾರ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

    ತುಂಗಭದ್ರಾ ನದಿಗೆ ಪ್ರತಿ ವರ್ಷ ಜಿಲ್ಲಾ ಗಣಿಬಾದಿತ ನಿಧಿಯಿಂದ 4 ಲಕ್ಷ ಬಲಿತ ಮೀನುಮರಿ, ಜಿಪಂನಿಂದ 3 ಲಕ್ಷ ಮೀನುಮರಿ ಬಿಡಲು ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

    ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಚಿನ್ನರಾಜು, ಕಾರ್ಯದರ್ಶಿ ಆರ್.ಕೃಷ್ಣ, ಪದಾಧಿಕಾರಿಗಳಾದ ಕೆ.ಷಣ್ಮುಗಂ, ಎಸ್.ಆರ್.ನಾಗೇಶ್, ಎ.ವಿರೂಪಾಕ್ಷಿ, ಎಂ.ರಾಜಾ, ಕೆ.ವೀರಭದ್ರನಾಯ್ಡು, ಕೆ.ಪಂಪಾಪತಿ, ಗಟ್ಟೆಪ್ಪ ಹಾಗೂ ಮೀನುಗಾರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts