More

    ಹೋರಾಟಗಾರರ ಮೇಲಿನ ದೌರ್ಜನ್ಯಕ್ಕೆ ಖಂಡನೆ

    ಕಂಪ್ಲಿ: ಪರಿಶಿಷ್ಟ ಜಾತಿ ಸಮುದಾಯಗಳ ನಡುವೆ ಒಳ ಮೀಸಲಾತಿ ಜಾರಿಗೆ ಹೋರಾಟ ನಿರತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ ಎಂದು ಇಲ್ಲಿನ ಶ್ರೀ ಮಾತಂಗ ಮಹರ್ಷಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಜಿ.ಪ್ರಸಾದ್ ಹೇಳಿದರು.

    ಇಲ್ಲಿನ ತಹಸೀಲ್ದಾರ್ ಗೌಸಿಯಾಬೇಗಮ್‌ಗೆ ಗುರುವಾರ ಮನವಿ ಸಲ್ಲಿಸಿ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು, ಒಳ ಮೀಸಲಾತಿ ನೀಡುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿನಿರತರ ಮೇಲೆ ಸರ್ಕಾರ ಪೊಲೀಸ್ ದೌರ್ಜನ್ಯ ಎಸಗಿದೆ. ಸದಾಶಿವ ಆಯೋಗದ ವರದಿ ಪರಾಮರ್ಶೆಗಾಗಿ ಉಪಸಮಿತಿಯ ನೇಮಕ ಕಾನೂನುಬಾಹಿರವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ವರದಿ ಅನುಷ್ಠಾನಗೊಳಿಸಬೇಕು. ಹೋರಾಟನಿರತರ ವಿರುದ್ಧದ ಪೊಲೀಸ್ ಪ್ರಕರಣ ಹಿಂಪಡೆಯಬೇಕು. ಹೋರಾಟಗಾರರಿಗೆ ಬಂದೋಬಸ್ತ್ ಒದಗಿಸುವ ಜೊತೆ ಆರೋಗ್ಯ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

    ಟ್ರಸ್ಟ್ ಪ್ರಮುಖರಾದ ಜಡೆಪ್ಪ, ಲಕ್ಷ್ಮೀಪತಿ, ಜಿ.ರಾಮಣ್ಣ, ವೀರಾಂಜಿನಿ, ಶ್ರೀನಿವಾಸ್, ಎನ್.ಬುಜ್ಜಿಕುಮಾರ್, ಎಚ್.ಕುಮಾರಸ್ವಾಮಿ, ದೇವಲಾಪುರ ರಾಮಯ್ಯ, ಶೇಖರ್, ಎಚ್.ಜಗದೀಶ್, ತಿಪ್ಪೇಸ್ವಾಮಿ, ಇ.ಧನಂಜಯ್ಯ, ಎಚ್.ಎಂ.ಚಂದ್ರಶೇಖರ್, ಪೇಂಟರ್ ನೀಲಪ್ಪ ಇತರರಿದ್ದರು. ಇದಕ್ಕೂ ಮುನ್ನ ವಾಲ್ಮೀಕಿ ವೃತ್ತದಿಂದ ಬೈಕ್ ರ‌್ಯಾಲಿ ಆರಂಭಗೊಂಡು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ಕೆಲಹೊತ್ತು ಪ್ರತಿಭಟನೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts