More

    ದೇವಿ ಪುರಾಣದಿಂದ ಜೀವನಕ್ಕೆ ಶಿಸ್ತು, ಇತಿಹಾಸ ಉಪನ್ಯಾಸಕ ಬಸವರಾಜ ಮೇಟಿ ವ್ಯಾಖ್ಯಾನ

    ಕಂಪ್ಲಿ: ಚಿದಾನಂದ ಅವಧೂತರು ರಚಿಸಿದ ದೇವಿ ಪುರಾಣವು ನಿಸ್ವಾರ್ಥ ಜೀವನ ಮಾರ್ಗವನ್ನು ಬೋಧಿಸುತ್ತದೆ ಎಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಬಸವರಾಜ ಮೇಟಿ ಹೇಳಿದರು.

    ಇಲ್ಲಿನ ಗುರುಮಠದಲ್ಲಿ ಸೀಗೆಹುಣ್ಣಿಮೆ ನಿಮಿತ್ತ ಓದ್ಸೋ ಕರಿಬಸಯ್ಯ ಅವರ ಶಿವಾನಂದಾಶ್ರಮ ಲಿಂ.ಓದ್ಸೋ ರುದ್ರಯ್ಯ ಅವರ ಸ್ಮರಣಾರ್ಥ 217ನೇ ಶಿವಾನುಭವ ಪ್ರವಚನದಲ್ಲಿ ದೇವಿ ಮಹಾತ್ಮೆ ಮತ್ತು ಜೀವನ ಶ್ರದ್ಧೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೇವಿ ಮಹಾತ್ಮೆಯು ದೇಹದ ಮಹತ್ವವನ್ನು ಸಾರುತ್ತದೆ. ಕ್ರೋಧದಿಂದ ಏನನ್ನೂ ಗೆಲ್ಲಲಾಗದು, ಲೌಕಿಕ ವಸ್ತು ವಿಷಯಗಳಿಗೆ ಮಹತ್ವ ನೀಡಬಾರದು. ಮನಸ್ಸನ್ನು ನಿಯಂತ್ರಿಸಿ, ತಾನೇ ಸ್ವತಃ ದೇವಿಯಾಗುವುದೇ ದೇವಿ ಪುರಾಣದ ಆಶಯ ಎಂದರು.

    ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ.ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದ ರುಮಾಲೆ ಮಾತನಾಡಿ, ದೇವಿ ಪುರಾಣವು ಜೀವನಕ್ಕೆ ಶಿಸ್ತನ್ನು ಒದಗಿಸುವ ಜತೆಗೆ ಮಾನಸಿಕ, ಬೌದ್ಧಿಕ, ಆತ್ಮ ಶಕ್ತಿಯನ್ನು ನೀಡುವ ಮೂಲಕ ಸಾಧನೆಯ ಗುಣವನ್ನು ಪ್ರೇರೇಪಿಸುತ್ತದೆ ಎಂದರು. ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಪ್ರಮುಖರಾದ ಗೊಗ್ಗ ಕಾರ್ತಿಕ್, ಎಚ್.ಎಂ.ಜಗದೀಶ್, ಕೆ.ಎಂ.ಚಂದ್ರಶೇಖರಶಾಸ್ತ್ರಿ, ಯೋಗರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts