More

    ಕಂಪ್ಲಿಯ ಕಂಟೇನ್ಮೆಂಟ್ ಜೋನ್ ಜನತೆಯ ಆರೋಗ್ಯದ ಮೇಲೆ ವೈದ್ಯರ ನಿಗಾ, ಪುರಸಭೆ ಸಿಬ್ಬಂದಿಯಿಂದ ದಿನಸಿ ರವಾನೆ

    ಕಂಪ್ಲಿ: ಪಟ್ಟಣದ ಮಾರುತಿ ನಗರದಲ್ಲಿನ ಕರೊನಾ ಕಂಟೇನ್ಮೆಂಟ್ ಜೋನ್‌ನಲ್ಲಿ ಬುಧವಾರ ಜನತೆಯ ಆರೋಗ್ಯದ ಮೇಲೆ ನಿಗಾವಹಿಸಿದ್ದು, ಪ್ರದೇಶದ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. 99ವಸತಿ ಮನೆಗಳು, ಮೂರು ಅಂಗಡಿಗಳಿದ್ದು, 370 ಜನ ವಾಸವಿದ್ದಾರೆ. ಕಂಟೇನ್ಮೆಂಟ್ ಪ್ರದೇಶದಿಂದ 0.75ಕಿ.ಮೀ. ದೂರದ ಬಫರ್ ಜೋನ್‌ನಲ್ಲಿ 594 ವಸತಿ ಮನೆಗಳು, 2714 ಜನಸಂಖ್ಯೆ, ಬಫರ್ ಜೋನ್‌ನಿಂದ 5ಕಿ.ಮೀ. ಅಂತರದಲ್ಲಿ 8410ವಸತಿ ಮನೆಗಳು, 39, 307ಜನಸಂಖ್ಯೆ ಇದೆ.

    ಕಟ್ಟೆಚ್ಚರ: ಕಂಟೇನ್ಮೆಂಟ್ ಪ್ರದೇಶದ ಜನತೆಗೆ ಬೇಕಾಗುವ ದಿನಸಿ, ತರಕಾರಿ, ಹಾಲು ಮೊಸರು ಇತ್ಯಾದಿಗಳನ್ನು ಪಟ್ಟಿ ಮಾಡಿಕೊಂಡು ಪುರಸಭೆ ಸಿಬ್ಬಂದಿ ತಲುಪಿಸುತ್ತಿದ್ದು, ಇಲ್ಲಿನ ಜನತೆ ಬೇರೆ ಕಡೆ ಸಂಚರಿಸದಂತೆ ಕಟ್ಟೆಚ್ಚರವಹಿಸಲಾಗಿದೆ. ಸೋಂಕಿತನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 13 ಜನರ ಪೈಕಿ ಒಬ್ಬರ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ. ಹೊರ ರಾಜ್ಯಗಳಿಂದ ಪಟ್ಟಣಕ್ಕೆ ಬಂದಿರುವ ಎಂಟು ಜನ ಹಾರ್ವೇಸ್ಟರ್ ಚಾಲಕ, ಕ್ಲೀನರ್‌ಗಳನ್ನು ಬಳ್ಳಾರಿಯ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

    ಮೇ 4ರಿಂದ 8ರತನಕ ಅಂದಾಜು 55 ಜನರನ್ನು ಹೋಮ್ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಮೇ 9ರಿಂದ 13ರತನಕ ಅಂದಾಜು 55ಕ್ಕೂ ಅಧಿಕ ಜನರನ್ನು ಹೊಸಪೇಟೆ, ಬಳ್ಳಾರಿಯ ಕ್ವಾರಂಟೈನ್‌ಗಳಿಗೆ ಕಳುಹಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಈಗಾಗಲೇ ಪಟ್ಟಣದಲ್ಲಿ ಬಂಗಾರದ ಅಂಗಡಿ, ಬಟ್ಟೆ ಅಂಗಡಿಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದೆ.

    ಡಾ.ರವೀಂದ್ರ ಕನಕೇರಿ, ಡಾ. ಮಲ್ಲೇಶಪ್ಪ, ಆಶಾ ಕಾರ್ಯಕರ್ತರು, ಕಿರಿಯ ಆರೋಗ್ಯ ಸಹಾಯಕರು ಕಂಟೇನ್ಮೆಂಟ್ ಪ್ರದೇಶದ ಜನತೆಯ ಆರೋಗ್ಯದ ಮೇಲೆ ನಿಗಾವಹಿಸಿದ್ದು ನಿಗದಿತ ಸಮಯದಲ್ಲಿ ಆರೋಗ್ಯ ತಪಾಸಿಸುತ್ತಿದ್ದಾರೆ. ಮಂಗಳವಾರ ಸಂಜೆ ಕಂಟೇನ್ಮೆಂಟ್ ಪ್ರದೇಶಕ್ಕೆ ಡಿಎಚ್‌ಒ ಡಾ.ಜನಾರ್ಧನ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts