More

    ಸುಸಜ್ಜಿತ ಸಮುದಾಯದ ಭವನ ನಿರ್ಮಾಣ

    ಕಂಪ್ಲಿ: ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸೇವಾಲಾಲ್ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಭರವಸೆ ನೀಡಿದರು.

    ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ತಾಲೂಕು ಬಂಜಾರ ನೌಕರರ ಸಂಘ, ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಅರಳಿಹಳ್ಳಿ ತಾಂಡಾದ ಸಂತ ಸೇವಾಲಾಲ್ ಮಹಾರಾಜರ ಸೇವಾ ಟ್ರಸ್ಟ್‌ಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಬಂಜಾರ ಸಮುದಾಯದವರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅರಳಿಹಳ್ಳಿ ತಾಂಡಾದ ಅಭಿವೃದ್ಧಿಗಾಗಿ ನಾನಾ ಕಾಮಗಾರಿಗಳನ್ನು ನೆರವೇರಿಸಿದ್ದೇನೆ. ಅರಳಿಹಳ್ಳಿ ತಾಂಡಾದಲ್ಲಿನ ವಸತಿ ಮತ್ತು ಪಟ್ಟಾದ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.

    ಪುರಸಭಾಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಮಾತನಾಡಿ, ಬಂಜಾರ ಸಮುದಾಯ ಭವನಕ್ಕಾಗಿ ಸಿಎ ನಿವೇಶನ ಒದಗಿಸಲಾಗುವುದು ಎಂದರು.

    ಕೊಪ್ಪಳ ಬಹದ್ದೂರ್ ಬಂಡ ಮಠದ ಪೀಠಾಧಿಪತಿ ಶ್ರೀಗೋಸಾಯಿ ಬಾಬಾ ಸಾನ್ನಿಧ್ಯವಹಿಸಿ ಮಾತನಾಡಿ, ಬಂಜಾರ ಸಮುದಾಯದವರು ಆಧುನಿಕತೆಯ ಸೋಂಕಿಗೆ ಸಿಲುಕಿ ಬಂಜಾರ ಧರ್ಮ, ಸಂಸ್ಕೃತಿ, ಪರಂಪರೆ, ಭಾಷೆಯಿಂದ ವಿಮುಖರಾಗಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ, ಉನ್ನತ ಹುದ್ದೆ ಕೊಡಿಸಬೇಕು ಎಂದರು.

    ಮಹಾರಾಷ್ಟ್ರ ಬಂಜಾರ ಸಮುದಾಯದ ಪ್ರಮುಖ ಅರುಣ ದಿಗಂಬರ್ ಚವ್ಹಾಣ, ಪ್ರಮುಖರಾದ ಲಿಂಗಪ್ಪನಾಯ್ಕ, ತಾರುಲಕ್ಷ್ಮಣನಾಯ್ಕ, ಮುನಿಯಾನಾಯ್ಕ, ಶಿವನಾಯ್ಕ, ಪುಂಡಲೀಕಪ್ಪ, ಎಲ್.ಸಂತೋಷ್, ಖೇಮ್ಯಾನಾಯ್ಕ, ಗುಂಡನಾಯ್ಕ, ಚನ್ನನಾಯ್ಕ, ಚಂದ್ರಪ್ಪ ನಾಯ್ಕ, ಇಸಿಒ ಜಿ.ವೀರೇಶ್, ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸುನಿತಾ ಪೂಜಾರ್ ಇತರರಿದ್ದರು.

    ಇದಕ್ಕೂ ಮುನ್ನ ಆಯೋಜಿಸಿದ್ದ ಸಂತ ಸೇವಾಲಾಲ್ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts