More

    ಹೂಕೋಸು, ಎಲೆಕೋಸು ಬೆಲೆ ಕುಸಿತ: ಕಂಪ್ಲಿಯಲ್ಲಿ ತೋಟದಲ್ಲಿಯೇ ಕೊಳೆಯಲು ಬಿಟ್ಟ ರೈತ

    ಕಂಪ್ಲಿ: ಕೈತುಂಬಾ ಆದಾಯ ಬರುವ ಹೂಕೋಸು, ಎಲೆಕೋಸು ಬೆಳೆದ ರೈತನಿಗೆ, ಕರೊನಾ ಲಾಕ್‌ಡೌನ್‌ನಿಂದಾಗಿ ಬೆಲೆ ಕುಸಿತದಿಂದಾಗಿ ತೋಟದಲ್ಲಿಯೇ ಕೊಳೆಯುವಂತ ಪರಿಸ್ಥಿತಿ ಬಂದಿದೆ.

    ತಾಲೂಕಿನ ದೇವಸಮುದ್ರ ಕ್ರಾಸ್ ಬಳಿ ಕೊಳವೆಬಾವಿಯಿಂದ ಮುಕ್ಕಾಲು ಎಕರೆಯಲ್ಲಿ ಕುರುಗೋಡು ನಾಗರಾಜಪ್ಪ ಎನ್ನುವ ರೈತ ಹೂಕೋಸು, ಎಲೆಕೋಸು ಬೆಳೆದಿದ್ದ. ಸುಮಾರು 55 ಸಾವಿರ ರೂ. ವೆಚ್ಚ ಮಾಡಿ ಬೆಳೆದಿದ್ದ, ನಿರೀಕ್ಷೆಯಂತೆ 65 ದಿನಗಳ ನಂತರ ಬೆಳೆಯನ್ನು ಉತ್ತಮವಾಗಿ ಬೆಳೆದು ಕೊಯ್ಲು ಹಂತಕ್ಕೆ ಬಂದಿತು.

    ಕೊಯ್ಲು ಮಾಡಿ ಗಂಗಾವತಿ ಮಾರುಕಟ್ಟೆಗೆ ಹೊಯ್ದರೆ ಬೆಲೆ ಕುಸಿತದಿಂದಾಗಿ ಸಾಗಣೆಗೆ ಹೊಯ್ದ ವಾಹನ ಬಾಡಿಗೆಯು ಬರದಂತಾಗಿದೆ. ಇದರಿಂದಾಗಿ ತೋಟದಲ್ಲಿನ ಹೂಕೋಸು, ಎಲೆಕೋಸು ಕೊಯ್ಲು ಮಾಡಿದರೆ ಇನ್ನಷ್ಟು ನಷ್ಟ ಎದುರಾಗುತ್ತದೆ ಎಂದು ಹಾಗೆಯೇ ಕೊಳೆಯಲು ಬಿಟ್ಟಿದ್ದೇನೆ ಎಂದು ರೈತ ನಾಗರಾಜಪ್ಪ ಅಳಲುತೊಡಿಕೊಂಡರು.

    ಕೊಯ್ಲು ಸಂದರ್ಭದಲ್ಲಿಯೇ ಕರೊನಾ ಲಾಕ್‌ಡೌನ್ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಇದರಿಂದಾಗಿ ಸುಮಾರು 55 ಸಾವಿರ ರೂ. ನಷ್ಟವಾಗಿದೆ. ಇದೀಗ ಬಾಡಿಗೆ ಟ್ರ್ಯಾಕ್ಟರ್ ಪಡೆದು ಬೆಳೆ ನಾಶ ಮಾಡಿ ಮಾಗಿ ಬಿತ್ತನೆಗೆ ಭೂಮಿ ಸಿದ್ಧಪಡಿಸುವುದಾಗಿ ನಷ್ಟ ಹೊಂದಿದ ರೈತ ನಾಗರಾಜಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts