More

    ಡಿಸೆಂಬರ್ ಬಳಿಕ ಕಂಬಳಕ್ಕೆ ಅನುಮತಿ ಸಾಧ್ಯತೆ

    ಮಂಗಳೂರು: ಅನ್‌ಲಾಕ್ ಮಾರ್ಗಸೂಚಿಯಂತೆ ಸಭೆ, ಸಮಾರಂಭ, ವಿವಿಧ ಕಾರ್ಯಕ್ರಮ ನಡೆಯುತ್ತಿದ್ದರೂ ಕಂಬಳಕ್ಕೆ ಮಾತ್ರ ಅನುಮತಿ ದೊರೆತಿಲ್ಲ. ಕಂಬಳ ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

    ಕೇಂದ್ರ-ರಾಜ್ಯ ಸರ್ಕಾರದ ಈಗಿನ ಅನ್‌ಲಾಕ್ ಮಾರ್ಗಸೂಚಿ ಪ್ರಕಾರ 200ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಆದ್ದರಿಂದ ಕಂಬಳಕ್ಕೆ ಸದ್ಯ ಅನುಮತಿ ನೀಡಲು ಅಸಾಧ್ಯ. ಮಾಸಾಂತ್ಯದ ವೇಳೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು, ಅದರಲ್ಲಿ ಕೆಲವೊಂದು ಬದಲಾವಣೆಗಳಿರುವ ಸಾಧ್ಯತೆಯಿದೆ. ಅದನ್ನು ಅನುಸರಿಸಿ ಡಿಸೆಂಬರ್ ಅಂತ್ಯ ಅಥವಾ ಜನವರಿ ವೇಳೆಗೆ ಕಂಬಳಕ್ಕೆ ಅನುಮತಿ ನೀಡಲಾಗುವುದು ಎಂದು ನಿಯೋಗಕ್ಕೆ ಸಚಿವರು ಭರವಸೆ ನೀಡಿದರು.

    ಸಮಿತಿ ಗೌರವಾಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಅಧ್ಯಕ್ಷ ಪಿ.ಆರ್.ಶೆಟ್ಟಿ, ಉಪಾಧ್ಯಕ್ಷ ನವೀನ್‌ಚಂದ್ರ ಆಳ್ವ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಮಂಗಳೂರು ಕಂಬಳ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಮುಚ್ಚೂರು ಲೋಕೇಶ್ ಶೆಟ್ಟಿ ಮೊದಲಾದವರಿದ್ದರು.

    15ರಂದು ತುರ್ತು ಸಭೆ: ಜಿಲ್ಲಾ ಕಂಬಳ ಸಮಿತಿ ನ.15ರಂದು ಸಾಯಂಕಾಲ 3 ಗಂಟೆಗೆ ಮಂಗಳೂರಿನ ಹೋಟೆಲ್ ಓಷಿಯನ್ ಪರ್ಲ್‌ನಲ್ಲಿ ತುರ್ತು ಸಭೆ ಕರೆದಿದೆ. ಜನವರಿಯಲ್ಲಿ ಕಂಬಳ ಆಯೋಜನೆಗೆ ಅವಕಾಶ ಸಿಕ್ಕರೆ ಕರೊನಾ ಮುನ್ನೆಚ್ಚರಿಕೆಯಂತೆ ಆಯೋಜನೆ ಹೇಗೆ ಎನ್ನುವ ಕುರಿತಂತೆ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಗಳಿವೆ.

    ಕಂಬಳ ನಡೆಸಲು ಅನುಮತಿ ನೀಡುವ ಬಗ್ಗೆ ಈ ತನಕ ಯಾರಿಂದಲೂ ಮನವಿ ಬಂದಿಲ್ಲ. ಆದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಮನವಿ ಬಂದ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು.
    – ಡಾ.ರಾಜೇಂದ್ರ ಕೆ.ವಿ, ದ.ಕ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts