More

    ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರ್ತಾರಾ ಮಾಜಿ ಸಿಎಂ ಕಮಲ್‌ನಾಥ್?

    ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಬಿಜೆಪಿಗೆ ಸೇರ್ಪಡೆಯಾದ ಬೆನ್ನೆಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್​ ಕಮಲ ಹಿಡಿಯಲಿದ್ದಾರೆ ಎನ್ನಲಾಗಿದೆ. ಲೋಕ ಚುನಾವಣೆ ಸಂದರ್ಭದಲ್ಲಿ ಈ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ.

    ಇದನ್ನೂ ಓದಿ:ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯಲಿದ್ದಾರಾ ಡಾಲಿ ಧನಂಜಯ್? ಸಿಎಂ ಸಿದ್ದು ಲೆಕ್ಕಾಚಾರದ ಹಿಂದಿದ್ಯಾ ‘ಲೋಕ’ ತಂತ್ರಗಾರಿಕೆ!

    ಕಳೆದ ಕೆಲವು ದಿನಗಳಿಂದ, ತಮ್ಮ ಭದ್ರಕೋಟೆಯಾದ ಛಿಂದ್ವಾರದ ಪ್ರವಾಸದಲ್ಲಿದ್ದ ಕಮಲ್ ನಾಥ್, ಅಲ್ಲಿಂದ ನೇರವಾಗಿ ದೆಹಲಿಗೆ ತೆರಳಿದ್ದಾರೆ. ಅವರು ಛಿಂದ್ವಾರದಿಂದ ಒಂಬತ್ತು ಬಾರಿ ಗೆದ್ದು ಸಂಸದರಾಗಿದ್ದರು. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್‌ನಲ್ಲಿದ್ದ ಕಾಂಗ್ರೆಸ್ ಅನ್ನು ತೆಗೆದು ಹಾಕಿದ್ದಾರೆ.

    ಕಮಲ್ ನಾಥ್ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಗೆ ನಿಷ್ಠರಾಗಿ ಇರಲಿದ್ದಾರೆ. ಕಮಲ್ ನಾಥ್ ಅವರ ರಾಜಕೀಯ ಜೀವನವು ನೆಹರೂ- ಗಾಂಧಿ ಕುಟುಂಬದೊಂದಿಗೆ ಶುರುವಾಗಿದ್ದು. ಸಂಕಷ್ಟದ ಸಂದರ್ಭದಲ್ಲಿಯೂ ಅವರು ಪಕ್ಷ ಹಾಗೂ ಗಾಂಧಿಗಳಿಗೆ ನಿಷ್ಠರಾಗಿದ್ದರು. ಇಂತಹ ಐತಿಹಾಸಿಕ ಬಾಂಧವ್ಯ ಇರುವಾಗ ಅಂತಹ ವ್ಯಕ್ತಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಬಿಟ್ಟು ಹೋಗುತ್ತಾರೆ ಎಂದು ನೀವು ಯೋಚಿಸುತ್ತೀರಾ? ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದರು.

    ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಲೋಕಸಭೆ ಚುನಾವಣೆಯಲ್ಲಿ ಛಿಂದ್ವಾರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುವುದು ಖಚಿತ ಎನ್ನಲಾಗಿದೆ. ಕಮಲ್ ನಾಥ್ ಅವರು ಬಿಜೆಪಿ ಸೇರ್ಪಡೆಯಾಗುವ ಸುದ್ದಿಗಳನ್ನು ಒಪ್ಪಿಕೊಂಡಿಲ್ಲ. ನಿರಾಕರಿಸಿಯೂ ಇಲ್ಲ. ನೀವು ಇದನ್ನು ಹೇಳುತ್ತಿದ್ದೀರಿ. ನಿಮಗೆ ಕಾತರ ಉಂಟಾಗುತ್ತಿದೆ. ನನಗೆ ಕಾತರ ಇಲ್ಲ. ಈ ಬದಿ ಅಥವಾ ಆ ಬದಿ, ಆದರೆ ಅಂತಹ ಯಾವ ಸಂಗತಿ ಇದ್ದರೂ ನಿಮಗೇ ಮೊದಲು ಹೇಳುತ್ತೇನೆ ಎಂದ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದರು.

    ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಕಮಲ್ ನಾಥ್ ಅವರು ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡದೆ ನಿರಾಶೆಗೊಳಿಸಿತ್ತು. ಕೈ ವಿರುದ್ಧ ಅಸಮಾಧಾನಗೊಂಡಿದ್ದಾರೆ. 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ನಂತರ ಕಮಲ್ ನಾಥ್ ಅವರಿಗೆ ಟಿಕೆಟ್ ನೀಡಲು ರಾಹುಲ್ ಗಾಂಧಿ ವಿರೋಧಿಸಿದ್ದರು ಎನ್ನಲಾಗಿದೆ.

    ಭಾರತ್ ಜೋಡೋ ನ್ಯಾಯ ಯಾತ್ರೆಗೂ ಮುನ್ನ ಬಿಜೆಪಿ ಸೇರ್ಪಡೆ?: ಕಮಲ್‌ ನಾಥ್ ಹಾಗೂ ಅವರ ಪುತ್ರ ನಕುಲ್, ಛಿಂದ್ವಾರಾ ಸಂಸದರಾದ ನಕುಲ್‌ನಾಥ್ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿ ವಿರುದ್ಧ ಹಮ್ಮಿಕೊಂಡಿರುವ ಭಾರತ್‌ ಜೋಡೋ ನ್ಯಾಯ ಯಾತ್ರಾಗೆ ಆಗಮಿಸುವ ಮುನ್ನವೇ ಅಪ್ಪ-ಮಗ ಬಿಜೆಪಿ ಪಾಳಯಕ್ಕೆ ಸೇರ್ಪಡೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

    370 ಸೀಟ್‌ ಗೆದ್ದರೆ ಶ್ಯಾಮ್‌ ಪ್ರಸಾದ್‌ ಮುಖರ್ಜಿಗೆ ಸೂಕ್ತ ಶ್ರದ್ಧಾಂಜಲಿ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts