More

    ಕಾಲಾಪಾನಿ ವಿವಾದ ಕಿಬ್ಬದಿಯ ಕೀಲು; ಮೊದಲು ಅದನ್ನು ಪರಿಹರಿಸಿಕೊಳ್ಳಿ

    ನವದೆಹಲಿ: ಕಾಲಾಪಾನಿ ವಿವಾದ ಕಿಬ್ಬದಿಯ ಕೀಲಿನಂತೆ ಚುಚ್ಚುತ್ತಿದೆ. ಮೊದಲು ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಗಡಿ ವಿವಾದಗಳು ಜನರ ಭಾವನೆಯೊಂದಿಗೆ ತಳಕು ಹಾಕಿಕೊಂಡಿರುತ್ತವೆ. ಆದ್ದರಿಂದ ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಭಾರತದಲ್ಲಿನ ನೇಪಾಳದ ರಾಯಭಾರಿ ನೀಲಂಬರ್​ ಆಚಾರ್ಯ ಸಲಹೆ ನೀಡಿದ್ದಾರೆ.

    ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಲಾಪಾನಿ ವಿವಾದವನ್ನು ಪ್ರಸ್ತಾಪಿಸಿರುವ ಅವರು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ವಿಷಯದಲ್ಲಿ ಇದು ಬಹುದೊಡ್ಡ ತೊಡಕಾಗಿದೆ. ಸಕಾಲದಲ್ಲಿ ಮತ್ತು ಸೂಕ್ತ ರೀತಿಯಲ್ಲಿ ಸಂಬಂಧ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಎರಡನೆಯದ್ದಾಗಿ ಯಾವುದೇ ವಿವಾದ ವಿಸ್ಫೋಟಿಸದಂತೆ ಎಚ್ಚರಿಕೆ ವಹಿಸಿ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಯಾವುದೇ ರಾಷ್ಟ್ರವಾದರೂ ಒಂದು ರಾಷ್ಟ್ರದೊಂದಿಗಿನ ಸಂಬಂಧವನ್ನು ಬಲಿಗೊಟ್ಟು ಮತ್ತೊಂದು ರಾಷ್ಟ್ರದೊಂದಿಗೆ ಸ್ನೇಹ ಬೆಳೆಸುವುದಿಲ್ಲ. ಇಂದಿನ ಜಗತ್ತು ಅಂತರ್ಗತವಾಗಿ ಬೆಸೆದುಕೊಂಡಿರುವುದರಿಂದ, ಒಂದು ರಾಷ್ಟ್ರದ ಜತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುವುದು ಅಸಾಧ್ಯದ ಮಾತು. ಹಾಗಾಗಿ ನೇಪಾಳವು ಚೀನಾದ ಪ್ರಭಾವಕ್ಕೆ ಒಳಗಾಗಿ, ಅದರಂತೆ ವರ್ತಿಸುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು ನೇಪಾಳದ ಮಾಜಿ ಕಾನೂನು ಮತ್ತು ನ್ಯಾಯಾಂಗ ಸಚಿವರೂ ಆಗಿರುವ ನೀಲಂಬರ್​ ಆಚಾರ್ಯ ಹೇಳಿದ್ದಾರೆ. ತನ್ಮೂಲಕ ಕಾಲಾಪಾನಿ ವಿವಾದದ ಹಿಂದೆ ಚೀನಾದ ಕೈವಾಡ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ.

    ಇದನ್ನೂ ಓದಿ: ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್​ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಭಾರತದೊಂದಿಗೆ ಇರುವ ಗಡಿ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಲು ನೇಪಾಳ ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಈ ವಿಷಯವಾಗಿ ಮಾತುಕತೆ ನಡೆಸಲು ಕಳೆದ ಡಿಸೆಂಬರ್​ನಲ್ಲಿ ಪ್ರಯತ್ನ ಮಾಡಲಾಯಿತು. ಈ ಕುರಿತ ಮಾತುಕತೆಗಾಗಿ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಗೆ ದಿನಾಂಕ ನಿಗದಿಪಡಿಸಲು ಮಾಡಿಕೊಂಡ ಮನವಿಯನ್ನು ಭಾರತ ಪುರಸ್ಕರಿಸಲಿಲ್ಲ ಎಂದು ದೂರಿದ್ದಾರೆ.

    ಭಾರತ ಮತ್ತು ನೇಪಾಳ ನಡುವಿನ ಗಡಿ ವಿಷಯವಾಗಿದ್ದ ಬಹುದೊಡ್ಡ ತಲೆನೋವುಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲಾಗಿದೆ. ಆದರೂ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಬಾಕಿವುಳಿದಿವೆ. ಮನಸ್ಸು ಮಾಡಿದರೆ ಈ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಿಕೊಳ್ಳುವುದು ಕಷ್ಟವೇನಲ್ಲ. ಕಾಲಾಪಾನಿ, ಲುಪುಲೇಖ್​ ಮತ್ತು ಲಿಂಪಿಯಾಧುರಾ ಮೇಲೆ ನೇಪಾಳ ತುಂಬಾ ಹಿಂದಿನಿಂದಲೂ ಹಕ್ಕುಸಾಧಿಸಲು ಯತ್ನಿಸುತ್ತಿರುವುದು ಭಾರತಕ್ಕೆ ತಿಳಿಯದಿರುವ ವಿಷಯವೇನಲ್ಲ. ಈ ಪ್ರದೇಶಗಳು ಕಾಳಿ ನದಿಯ ಪೂರ್ವಕ್ಕೆ ಇರುವುದರಿಂದ, ಸೌಗೌಳಿ ಒಪ್ಪಂದದ ಪ್ರಕಾರ ಈ ಪ್ರದೇಶಗಳು ನೇಪಾಳಕ್ಕೆ ಸೇರಿದ್ದಾಗಿವೆ. ಈ ವಿಷಯವಾಗಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಂಡರೆ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗೇ ಉಳಿಯುತ್ತದೆ ಎಂದು ತಿಳಿಸಿದ್ದಾರೆ.

    ಉತ್ತರ ಕೊರಿಯಾದಲ್ಲಿ ಮೊದಲ ಕರೊನಾ ಶಂಕಿತ ಪ್ರಕರಣ: ಸೋಂಕು ತಡೆಯಲು ಕಿಮ್​ ಕಠಿಣ ನಿರ್ಧಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts